ಮೇ.೧೦ರಿಂದ ಎರಡನೇ ಹಂತದ `ರಜಾ-ಮಜಾ' ಬೇಸಿಗೆ ಶಿಬಿರ 



ಭದ್ರಾವತಿ : ನಗರದ ಜನ್ನಾಪುರ ಅಪರಂಜಿ ಅಭಿನಯ ಶಾಲೆಯಿಂದ ಪ್ರತಿ ವರ್ಷದಂತೆ ಈ ಬಾರಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಎರಡನೇ ಹಂತದ ರಜಾ-ಮಜಾ ಬೇಸಿಗೆ ಶಿಬಿರ ಮೇ.೧೦ ರಿಂದ ೧೭ರವರೆಗೆ ಆಯೋಜಿಸಲಾಗಿದೆ. 
    ಉಂಬ್ಳೆಬೈಲು ರಸ್ತೆ, ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ರಿಂದ ಮಧ್ಯಾಹ್ನ ೧.೩೦ರವರೆಗೆ ಶಿಬಿರ ನಡೆಯಲಿದ್ದು, ಶಿಬಿರದಲ್ಲಿ ೬ ರಿಂದ ೧೬ ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. 
    ಡ್ರಾಮಾ ಜ್ಯೂನಿಯರ್, ಅಭಿನಯ, ಗೀತಗಾಯನ, ಅಭಿನಯ ನೃತ್ಯ, ಡ್ರಾಯಿಂಗ್, ವ್ಯಕ್ತಿ ವಿಕಸನ, ಕ್ರಾಫ್ಟ್ ವರ್ಕ್ ಮತ್ತು ಯೋಗ ಕುರಿತು ಸಂಪನ್ಮೂಲ ವ್ಯಕ್ತಿ, ರಂಗಕರ್ಮಿ, ಕಿರುತೆರೆ-ಚಲನಚಿತ್ರ ನಟ ಅಪರಂಜಿ ಶಿವರಾಜ್ ಮತ್ತು ತಂಡದವರಿಂದ ತರಬೇತಿ ನೀಡಲಾಗುವುದು. ಆಸಕ್ತರು ಹೆಸರು ನೋಂದಾಯಿಸಲು ಹಾಗು ಹೆಚ್ಚಿನ ಮಾಹಿತಿಗಾಗಿ ೯೯೮೦೫೩೪೪೦೬ ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ.