ಪ್ರಗತಿಪರ ಚಿಂತಕ, ಹೋರಾಟಗಾರ ಡಿ.ಸಿ ಮಾಯಣ್ಣ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ : ಬಿ.ಕೆ ಮೋಹನ್
"ಐ ಲವ್ ಯೂ ನಮ್ಮ ಭದ್ರಾವತಿ" ನಾಮಫಲಕ ಶಾಸಕ ಸಂಗಮೇಶ್ವರ್ ಅನಾವರಣ
ಭದ್ರಾವತಿಯಲ್ಲಿ ಅಪ್ಪರ್‌ಹುತ್ತಾ ವೃತ್ತಕ್ಕೆ ``ಕಾಮ್ರೇಡ್ ಮಾಯಣ್ಣ ವೃತ್ತ'' ಹೆಸರು ನಾಮಕರಣ ಹಾಗೂ "ಐ ಲವ್ ಯೂ ನಮ್ಮ ಭದ್ರಾವತಿ" ಶಾಸಕ ಬಿ.ಕೆ.ಸಂಗಮೇಶ್ವರ್ ಉದ್ಘಾಟಿದರು.
ಭದ್ರಾವತಿ; ನಗರದಲ್ಲಿ ಕಾರ್ಮಿಕ ಮುಖಂಡ, ಪ್ರಗತಿಪರ ಚಿಂತಕ ಡಿ.ಸಿ ಮಾಯಣ್ಣರವರು ಸ್ವಾಭಿಮಾನದ ಬದುಕು ನಡೆಸುವ ಮೂಲಕ ಕಾರ್ಮಿಕರ ಅನೇಕ ಸಮಸ್ಯೆಗಳಿಗೆ ಹೋರಾಟದ ಮೂಲಕ ನ್ಯಾಯ ದೊರಕಿಸಿಕೊಟ್ಟಿದ್ದರು ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
ನಗರದ ವಾರ್ಡ್ ನಂ.೨ರ ವ್ಯಾಪ್ತಿಯ ಅಪ್ಪರ್‌ಹುತ್ತಾ ವೃತ್ತಕ್ಕೆ "ಕಾಮ್ರೇಡ್ ಮಾಯಣ್ಣ ವೃತ್ತ" ಹೆಸರು ನಾಮಕರಣ ಹಾಗೂ ``ಐ ಲವ್ ಯೂ ನಮ್ಮ ಭದ್ರಾವತಿ" ನಾಮಫಲಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಡಿ.ಸಿ ಮಾಯಣ್ಣನವರು ಕಾರ್ಮಿಕ ವರ್ಗಕ್ಕೆ ಮಾತ್ರವಲ್ಲ ಕ್ಷೇತ್ರದ ಶಾಸಕರು ಸೇರಿದಂತೆ ಪ್ರತಿಯೊಬ್ಬರಿಗೂ ಮಾರ್ಗದರ್ಶಕರಾಗಿದ್ದರು. ನಗರದಲ್ಲಿ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲೆಂದು ಅಪ್ಪರ್‌ಹುತ್ತಾ ವೃತ್ತಕ್ಕೆ ``ಕಾಮ್ರೇಡ್ ಮಾಯಣ್ಣ ವೃತ್ತ'' ಹೆಸರು ನಾಮಕರಣ ಮಾಡಲಾಗಿದೆ ಎಂದರು
ಸಹೋದರ ಬಿ.ಕೆ ಸಂಗಮೇಶ್ವರ್ ೩ ಬಾರಿ ಶಾಸಕರಾಗಿ ಆಯ್ಕೆಯಾದರೂ ಸರ್ಕಾರ ನಮ್ಮದಾಗಿರದ ಕಾರಣ ಕ್ಷೇತ್ರದ ಅಭಿವೃದ್ದಿ ಸಾಧ್ಯವಾಗುತ್ತಿರಲಿಲ್ಲ. ಈಗ ನಮ್ಮದೇ ಸರ್ಕಾರವಿದ್ದು, ಹೆಚ್ಚಿನ ಅನುದಾನ ಬರುತ್ತಿದ್ದು, ಇದೀಗ ಕ್ಷೇತ್ರ ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ ಎಂದರು.
ಪೌರಾಯುಕ್ತ ಕೆ.ಎನ್ ಹೇಮಂತ್ ಮಾತನಾಡಿ, ಶಾಸಕರ ಇಚ್ಚಾಶಕ್ತಿಯ ಮೇರೆಗೆ ಕ್ಷೇತ್ರಕ್ಕೆ ತರಲಾಗುತ್ತಿರುವ ಹೆಚ್ಚು ಹೆಚ್ಚು ಅನುದಾನದಿಂದಾಗಿ ನಗರವನ್ನು ಸುಂದರವನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ವೃತ್ತದ ಆಸುಪಾಸು ಕೊಳಚೆಯಾಗಿದ್ದ ಪ್ರದೇಶವನ್ನು ಸ್ವಚ್ಚತೆಯಿಂದಿಡುವ ದೃಷ್ಟಿಯಲ್ಲಿ ಐ ಲವ್ ಭದ್ರಾವತಿ ನಾಮಫಲಕ ಅಳವಡಿಸಿ ಹೊಸರೂಪ ಕೊಡಲಾಗಿದೆ. ಎಲ್ಲಾ ವೃತ್ತಗಳಲ್ಲಿಯೂ ಆಕರ್ಷಣೆಗಾಗಿ ವಿವಿಧ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಶಾಸಕರ ಪುತ್ರ ಬಿ.ಎಸ್ ಗಣೇಶ್. ಪಾತ್ರ ಹೆಚ್ಚಿನದ್ದಾಗಿದೆ ಎಂದರು.
"ಕಾಮ್ರೇಡ್ ಮಾಯಣ್ಣ ವೃತ್ತ" ಎಂದು ನಾಮಕರಣ ಹಾಗೂ "ಐ ಲವ್ ಯೂ ನಮ್ಮ ಭದ್ರಾವತಿ" ನಾಮಫಲಕ ಉದ್ಘಾಟನೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ನೆರವೇರಿಸಿದರು.
ಭದ್ರಾವತಿ ಅಪ್ಪರ್‌ಹುತ್ತಾ ವೃತ್ತದಲ್ಲಿ ಗಮನ ಸೆಳೆಯುತ್ತಿದೆ "ಐ ಲವ್ ಯೂ ನಮ್ಮ ಭದ್ರಾವತಿ" ನಾಮಫಲಕ.
ಗಮನ ಸೆಳೆಯುತ್ತಿದೆ "ಐ ಲವ್ ಯೂ ನಮ್ಮ ಭದ್ರಾವತಿ" ನಾಮಫಲಕ :
ಈಗಾಗಲೇ ಬಹುತೇಕ ಸ್ಥಳೀಯ ಸಂಸ್ಥೆಗಳು ಆಯಾ ಕ್ಷೇತ್ರಗಳನ್ನು ಪ್ರತಿಬಿಂಬಿಸುವ ಜೊತೆಗೆ ಸ್ವಚ್ಛತೆಗೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ವಿನೂತನ ಪ್ರಯತ್ನ ಕೈಗೊಂಡು ಯಶಸ್ವಿಯಾಗಿವೆ. ಈ ನಿಟ್ಟಿನಲ್ಲಿ ಇಲ್ಲಿನ ನಗರಸಭೆ ಆಡಳಿತ ಸಹ "ಐ ಲವ್ ಯೂ ನಮ್ಮ ಭದ್ರಾವತಿ" ನಾಮಫಲಕ ಆನಾವರಣಗೊಳಿಸಿದ್ದು, ಈ ನಾಮಫಲಕ ಹೆಚ್ಚು ಆಕರ್ಷಕವಾಗಿದೆ. ನೋಡುಗರು ಬೆರಗಾಗುತ್ತಿದ್ದು, ಒಂದು ಸೆಲ್ಫಿ ಕ್ಲಿಕಿಸಿಕೊಂಡು ಮುನ್ನಡೆಯುತ್ತಿರುವುದು ಕಂಡು ಬರುತ್ತಿದೆ.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಸದಸ್ಯರಾದ ಲತಾಚಂದ್ರಶೇಖರ್, ಮಂಜುಳಾ ಸುಬ್ಬಣ್ಣ, ಕಾಂತರಾಜ್, ಬಸವರಾಜ ಬಿ. ಆನೇಕೊಪ್ಪ, ಶಶಿಕಲಾ ನಾರಾಯಣಪ್ಪ, ವಿಲ್ಸನ್ ಬಾಬು, ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಹಿರಿಯ ಮುಖಂಡ ಕಬ್ಬಡಿ ಕೃಷ್ಣೆಗೌಡ, ನಗರಸಭೆ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

.jpeg)