ಪಿಡಬ್ಲ್ಯೂಡಿ ನಿವೃತ್ತ ವ್ಯವಸ್ಥಾಪಕ ಶಾಮಣ್ಣ ನಿಧನ 


ಶಾಮಣ್ಣ 
    ಭದ್ರಾವತಿ : ನಗರದ ವಾರ್ಡ್ ನಂ.೩ರ ಡಾ. ರಾಜಕುಮಾರ್ ರಸ್ತೆ, ಗೌಳಿಗರ ಬೀದಿ ನಿವಾಸಿ, ಲೋಕೋಪಯೋಗಿ ಇಲಾಖೆ ನಿವೃತ್ತ ವ್ಯವಸ್ಥಾಪಕ ಶಾಮಣ್ಣ(೭೯) ನಿಧನ ಹೊಂದಿದರು. 
    ವಿಕಲಚೇತನರಾದ ಇವರು ಅವಿವಾಹಿತರಾಗಿದ್ದು, ಚಿರಪರಿಚಿತರಾಗಿದ್ದರು. ಇವರ ಅಂತ್ಯಕ್ರಿಯೆ ಶನಿವಾರ ಹೊಳೆಹೊನ್ನೂರು ರಸ್ತೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. 
    ಇವರ ನಿಧನಕ್ಕೆ ಪ್ರಮುಖರಾದ ಎಂ.ಎಸ್ ಜನಾರ್ಧನಾ ಅಯ್ಯಂಗಾರ್, ಎಸ್. ನರಸಿಂಹಚಾರ್, ಮುರುಳಿ ಭಟ್ಟರು, ವಿಶ್ವ ಹಿಂದೂ ಪರಿಷದ್ ಪ್ರಮುಖರಾದ  ಹಾ. ರಾಮಪ್ಪ, ಹಳೇನಗರ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಭಜನ ಮಂಡಳಿ ಹಾಗು ವೇದ ಪಾಠ ಶಾಲೆ ಮತ್ತು ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.