ಮಾರಾಕಾಸ್ತ್ರಗಳಿಂದ ಹಲ್ಲೆ ಪ್ರಕರಣ : ೬ ಮಂದಿಗೆ ಜೈಲು ಶಿಕ್ಷೆ, ದಂಡ
ಭದ್ರಾವತಿ ತಾಲೂಕಿನ ಜಿಂಕಲೈನ್ ವೀರಾಪುರ ರಸ್ತೆಯಲ್ಲಿರುವ ಬಾಬುರವರ ಮನೆ ಹಿಂಭಾಗದ ತೆಂಗಿನ ತೋಟದಲ್ಲಿ ಸುಮಾರು ೬ ವರ್ಷಗಳ ಹಿಂದೆ ಯುವಕನೊಬ್ಬನ ಮೇಲೆ ಮಾರಾಕಾಸ್ತ್ರಗಳಿಂದ ನಡೆಸಲಾಗಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಮಂದಿ ಯುವಕರಿಗೆ ೩ ವರ್ಷ ಜೈಲು ಶಿಕ್ಷೆ ಹಾಗು ದಂಡ ವಿಧಿಸಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆಗೊಳಗಾದ ೬ ಮಂದಿ ಯುವಕರು.
ಭದ್ರಾವತಿ: ಸುಮಾರು ೬ ವರ್ಷಗಳ ಹಿಂದೆ ತೆಂಗಿನ ತೋಟವೊಂದರಲ್ಲಿ ಯುವಕನೊಬ್ಬನ ಮೇಲೆ ಮಾರಾಕಾಸ್ತ್ರಗಳಿಂದ ನಡೆಸಲಾಗಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ೬ ಮಂದಿ ಯುವಕರಿಗೆ ೩ ವರ್ಷ ಜೈಲು ಶಿಕ್ಷೆ ಹಾಗು ದಂಡ ವಿಧಿಸಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ತಾಲೂಕಿನ ಜಿಂಕಲೈನ್ ವೀರಾಪುರ ರಸ್ತೆಯಲ್ಲಿರುವ ಬಾಬುರವರ ಮನೆ ಹಿಂಭಾಗದ ತೆಂಗಿನ ತೋಟದಲ್ಲಿ ಮೇ.೧೦, ೨೦೨೦ರಂದು ಕಿರಣ್(೨೯), ಮಂಜುನಾಥ್ (೨೫) ಮತ್ತು ಅರುಣ (೨೪) ರವರು ನಿಂತಿದ್ದಾಗ, ಅಜೇಯ ಅಲಿಯಾಸ್ ಅಜ್ಜಿ(೨೪ ), ತೇಜು ಅಲಿಯಾಸ್ ತೇಜಸ್ವಿ ಅಲಿಯಾಸ್ ಟೀಕು(೨೨), ಮನು ಅಲಿಯಾಸ್ ಗೊಣ್ಣೆ ಮಧು ಅಲಿಯಾಸ್ ಮನೋಜ್(೨೨), ಆದರ್ಶ ಅಲಿಯಾಸ್ ಆದು(೨೫), ಅರುಣ(೨೦) ಪಾನಿಪುರಿ ರಂಗ ಅಲಿಯಾಸ್ ರಂಗ ಅಲಿಯಾಸ್ ಪಾನಿಪುರಿ(೨೫)ರವರು ಮಂಜುನಾಥ್ ರವರ ಮೇಲಿನ ಹಳೆಯ ದ್ವೇಷದ ಹಿನ್ನಲೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಅವಾಚ್ಯ ಶಬ್ದಗಳೊಂದಿಗೆ ಹಲ್ಲೆ ನಡೆಸಿದ್ದರು. ಮಂಜುನಾಥ್ ಗಂಭೀರವಾಗಿ ಗೊಂಡಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಯಾಗಿದ್ದ ಸಹಾಯಕ ಠಾಣಾ ನಿರೀಕ್ಷಕ ಕುಬೇರಪ್ಪರವರು ಪ್ರಕರಣದ ತನಿಖೆ ಪೂರೈಸಿ, ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ ವಾದ ಮಂಡಿಸಿದ್ದರು. ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಮೇ.೪ ರಂದು ಮೊದಲ ಆರೋಪಿತನಿಗೆ ೭ ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಮೊದಲ ಆರೋಪಿ ಸೇರಿ ಒಟ್ಟು ೬ ಆರೋಪಿತರಿಗೆ ೩ ವರ್ಷ ಕಠಿಣ ಕಾರಾವಾಸ ಮತ್ತು ಒಟ್ಟು ೨,೩೦,೦೦೦ ರು. ದಂಡ ವಿಧಿಸಿದ್ದು, ನೊಂದವರಾದ ಮಂಜುನಾಥ್‌ರವರಿಗೆ ೧,೫೦,೦೦೦ ರು. ಪರಿಹಾರ ಕೊಡಲು ಆದೇಶಿಸಿರುತ್ತಾರೆ.
