ನ್ಯಾಯಾಧೀಶೆ ಇಂದಿರಾ ಮೈಲಾಸ್ವಾಮಿ ಚಟ್ಟಿಯಾರ್ ನಿವೃತ್ತಿ : ಸನ್ಮಾನಿಸಿ ಗೌರವಿಸಿದ ವಕೀಲರು
ಭದ್ರಾವತಿ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಇಂದಿರಾ ಮೈಲಾಸ್ವಾಮಿ ಚೆಟ್ಟಿಯಾರ್‌ರವರು ಮೇ.೩೧ರಂದು ನಿವೃತ್ತಿ ಹೊಂದುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಶುಕ್ರವಾರ ಅವರನ್ನು ನಗರದ ವಕೀಲರು ಸನ್ಮಾನಿಸಿ ಗೌರವಿಸಿದರು.
ಭದ್ರಾವತಿ : ಹಿರಿಯ ನ್ಯಾಯಾಧೀಶೆ ಇಂದಿರಾ ಮೈಲಾಸ್ವಾಮಿ ಚೆಟ್ಟಿಯಾರ್‌ರವರು ಮೇ.೩೧ರಂದು ನಿವೃತ್ತಿ ಹೊಂದುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಶುಕ್ರವಾರ ಅವರನ್ನು ನಗರದ ವಕೀಲರು ಸನ್ಮಾನಿಸಿ ಗೌರವಿಸಿದರು.
ನ್ಯಾಯಾಧೀಶೆ ಇಂದಿರಾ ಮೈಲಾಸ್ವಾಮಿ ಚೆಟ್ಟಿಯಾರ್‌ರವರು ಇಲ್ಲಿನ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ಕರ್ತವ್ಯ ಆರಂಭಿಸಿದಾಗಿನಿಂದ ಹಲವು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಮರಣ ದಂಡನೆ ಶಿಕ್ಷೆ ಸಹ ವಿಧಿಸಿದ್ದು, ಈ ಮೂಲಕ ಗಮನ ಸೆಳೆದಿದ್ದರು.
ತಾಲೂಕು ವಕೀಲರ ಸಂಘದ ನೇತೃತ್ವದಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನ್ಯಾಯಾಧೀಶೆ ಇಂದಿರಾ ಮೈಲಾಸ್ವಾಮಿ ಚಟ್ಟಿಯಾರ್‌ರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ತಾಲೂಕು ವಕೀಲರ ಸಂಘದ ಹಾಲಿ ಹಾಗು ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯ ಹಾಗು ಕಿರಿಯ ವಕೀಲರು ಉಪಸ್ಥಿತರಿದ್ದರು.
