ವಡೇರಾಪುರ ಸರ್ಕಾರಿ ಶಾಲೆ ಶಿಕ್ಷಕ ಎಚ್. ಯೋಗೇಂದ್ರಪ್ಪ ಸೇರಿ ೧೦ ಮಂದಿ ನಿವೃತ್ತಿ
ಸಿಆರ್‌ಪಿ ಕಛೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸನ್ಮಾನ, ಗೌರವ
ಭದ್ರಾವತಿ ತಾಲೂಕಿನ ವಡೇರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಚ್. ಯೋಗೇಂದ್ರಪ್ಪ ಸೇರಿದಂತೆ ಒಟ್ಟು ೧೦ ಮಂದಿ ಶಿಕ್ಷಕರು ಮೇ.೩೧ರಂದು ವಯೋ ನಿವೃತ್ತಿ ಹೊಂದುತ್ತಿದ್ದು, ಈ ಹಿನ್ನಲೆಯಲ್ಲಿ ಶನಿವಾರ ಹಳೇನಗರದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ: ತಾಲೂಕಿನ ವಡೇರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಚ್. ಯೋಗೇಂದ್ರಪ್ಪ ಸೇರಿದಂತೆ ಒಟ್ಟು ೧೦ ಮಂದಿ ಶಿಕ್ಷಕರು ಮೇ.೩೧ರಂದು ವಯೋ ನಿವೃತ್ತಿ ಹೊಂದುತ್ತಿದ್ದು, ಈ ಹಿನ್ನಲೆಯಲ್ಲಿ ಶನಿವಾರ ಹಳೇನಗರದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ಸರ್ಕಾರಿ ಕಿರಿಯ ಹಾಗು ಹಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರಾದ ವಡೇರಾಪುರದ ಎಚ್. ಯೋಗೇಂದ್ರಪ್ಪ, ಹನುಮಂತಪುರದ ಲೋಕೇಶಪ್ಪ, ಹಾಲಪ ವೃತ್ತದ ಮೈಲಾರಪ್ಪ, ಹಿರಿಯೂರಿನ ಸಿ.ಎಚ್ ರುದ್ರಮ್ಮ, ನಂಜಾಪುರದ ಸರಸ್ವತಿ, ಯಶೋಧಮ್ಮ, ಸೀಗೆಬಾಗಿ ಷಹರ್ ಬಾನು, ಸಿರಿಯೂರಿನ ನೇತ್ರಾವತಿ, ಬಾಳೇಮಾರನಹಳ್ಳಿ ಇಂದ್ರಮ್ಮ ಮತ್ತು ಉಕ್ಕುಂದ ಪಿ.ಶಾಂತ ನಿವೃತ್ತಿ ಹೊಂದುತ್ತಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಟಿ. ಪೃಥ್ವಿರಾಜ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಯೋ ನಿವೃತ್ತಿ ಹೊಂದುತ್ತಿರುವ ಶಿಕ್ಷಕರಿಗೆ ಶಾಲು ಹೊದಿಸಿ, ಹಾರ ಹಾಕಿ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಲಾಯಿತು.
ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಎಂ.ವಿ ಪಂಚಾಕ್ಷರಿ, ಸಿ.ಆರ್.ಪಿ ಪಂಚಪ್ಪ, ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷ ಸಿ. ಜಯಪ್ಪ, ನಿವೃತ್ತ ಶಿಕ್ಷಕ ಚುಂಜ್ಯಾನಾಯ್ಕ, ಶಿಕ್ಷಕರಾದ ಎಚ್.ಎಂ ಪ್ರಕಾಶ್, ಎನ್.ಡಿ ಮಂಜುನಾಥ್ ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಸಿ.ಆರ್.ಪಿ ಕಛೇರಿ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
