ವಿಐಎಸ್‌ಎಲ್ ನಿವೃತ್ತ ಅಧಿಕಾರಿ ರತ್ನ ನಿಧನ
ವಿಐಎಸ್‌ಎಲ್ ನಿವೃತ್ತ ಅಧಿಕಾರಿ ರತ್ನ
ಭದ್ರಾವತಿ : ನಗರದ ಹುತ್ತಾಕಾಲೋನಿ ಜಿಂಕ್‌ಲೈನ್ ರಸ್ತೆ, ಸೇಂಟ್ ಚಾರ್ಲ್ಸ್ ವಿದ್ಯಾಸಂಸ್ಥೆ ಮುಂಭಾಗದ ನಿವಾಸಿ, ವಿಐಎಸ್‌ಎಲ್ ನಿವೃತ್ತ ಅಧಿಕಾರಿ ರತ್ನ(೮೦) ಗುರುವಾರ ಬೆಳಗ್ಗೆ ವಯೋಸಹಜವಾಗಿ ನಿಧನ ಹೊಂದಿದರು.
ಇವರಿಗೆ ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ. ಇವರ ಅಂತ್ಯ ಕ್ರಿಯೆಯು ಸಂಜೆ ನೆರವೇರಿತು. ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ನಿವೃತ್ತ ಅಧಿಕಾರಿಗಳು ಸಂತಾಪ ಸೂಚಿಸಿದರು.
