ಎಂಪಿಎಂ ನಿವೃತ್ತ ನೌಕರ ದೇವದತ್ತ ನಿಧನ
ದೇವದತ್ತ
ಭದ್ರಾವತಿ : ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ನೌಕರ, ಉಜ್ಜನಿಪುರ ನಿವಾಸಿ ಗಂಧಮ್ ಜಾರ್ಜ್ ದೇವದತ್ತ ಸೋಮವಾರ ರಾತ್ರಿ ನಿಧನ ಹೊಂದಿದರು.
ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಎಂಪಿಎಂ ಕಾರ್ಖಾನೆಯ ಚಿಪ್ಪರ್ ಮೆಕಾನಿಕ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಉಜ್ಜನಿಪುರ ನೆಕ್ಸ್ಟ್ ಟು ಚರ್ಚ್ ಆಫ್ ಕ್ರಿಸ್ಟ್ ಸೆಕೆಂಡ್ ದೇವಾಲಯದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಂಗಳವಾರ ಸಂಜೆ ಬೈಪಾಸ್ ರಸ್ತೆ, ಮಿಲ್ಟ್ರಿಕ್ಯಾಂಪ್ ಸಮೀಪದ ಯೂನೈಟೆಡ್ ಪ್ರೊಟೆಸ್ಟೆಂಟ್ ಸಮಾಧಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಇವರ ನಿಧನಕ್ಕೆ ಎಂಪಿಎಂ ನಿವೃತ್ತ ಕಾರ್ಮಿಕರು, ಗಣ್ಯರು ಸಂತಾಪ ಸೂಚಿಸಿದ್ದಾರೆ.
