ಲ್ಯಾಬೋರೇಟರಿಯಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ : ಪೌರ ಕಾರ್ಮಿಕರಿಗೆ ಸನ್ಮಾನ


ಪ್ರತಿವರ್ಷದಂತೆ ಈ ಬಾರಿ ಸಹ ಭದ್ರಾವತಿ ನಗರದ ರಂಗಪ್ಪ ವೃತ್ತ, ಮಧು ಲ್ಯಾಬೋರೇಟರಿ ವತಿಯಿಂದ `ವಿಶ್ವ ಕಾರ್ಮಿಕರ ದಿನಾಚರಣೆ' ಪೌರಕಾರ್ಮಿಕರನ್ನು ಸನ್ಮಾನಿಸುವ ಮೂಲಕ ವಿನೂತನವಾಗಿ ಆಚರಿಸಲಾಯಿತು. 
    ಭದ್ರಾವತಿ: ಪ್ರತಿವರ್ಷದಂತೆ ಈ ಬಾರಿ ಸಹ ನಗರದ ರಂಗಪ್ಪ ವೃತ್ತ, ಮಧು ಲ್ಯಾಬೋರೇಟರಿ ವತಿಯಿಂದ `ವಿಶ್ವ ಕಾರ್ಮಿಕರ ದಿನಾಚರಣೆ' ಪೌರಕಾರ್ಮಿಕರನ್ನು ಸನ್ಮಾನಿಸುವ ಮೂಲಕ ವಿನೂತನವಾಗಿ ಆಚರಿಸಲಾಯಿತು. 
    ರಂಗಪ್ಪ ವೃತ್ತ ಮತ್ತು ಕೇಶವಪುರ ಬಡಾವಣೆಯಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಾದ ಎಸ್. ಶರವಣ, ಲಿಂಗಮ್ಮ, ತಿರುಮಲ, ಲಕ್ಷ್ಮಮ್ಮ, ಲತೇಶ್ ಮತ್ತು ತುಳಸಿ ಸೇರಿದಂತೆ ೬ ಜನರನ್ನು  ಗೌರವಿಸಿ ಸನ್ಮಾನಿಸಲಾಯಿತು. ಮಧು ಲ್ಯಾಬ್ ಮಾಲೀಕ, ಸಮಾಜ ಸೇವಕ ಎಸ್.ಆರ್. ಜಗದೀಶ್ ಮಾತನಾಡಿ, ಜಗತ್ತು ಸುಖ ನಿದ್ರೆಯಲ್ಲಿದ್ದಾಗ ಎದ್ದು ತಮ್ಮ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರ ಕಾರ್ಯ ಅಭಿನಂದನೀಯ. ಸಮಾಜದ ಸ್ವಚ್ಚತೆಯನ್ನು, ಆರೋಗ್ಯವನ್ನು ಕಾಪಾಡುವ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗ ಉತ್ತಮ ಗುಣಮಟ್ಟದ ಜೀವನ ನಡೆಸಬೇಕು. ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಒತ್ತು ನೀಡಬೇಕು. ದುಶ್ಚಟಗಳಿಗೆ ಬಲಿಯಾಗಬಾರದೆಂದರು. ಸಮಾಜ ಕೂಡ ಎಲ್ಲಾ ಕಾರ್ಮಿಕರನ್ನು ಗೌರವದಿಂದ ಕಾಣಬೇಕು. ಅವರ ಕಾನೂನುಬದ್ದ ಬೇಡಿಕೆಗೆ ಆದ್ಯತೆ ನೀಡಬೇಕೆಂದರು. 
    ಲೀಲಾವತಿ ಜಗದೀಶ್ ಮತ್ತು ಲ್ಯಾಬ್ ಸಿಬ್ಬಂದಿಗಳಾದ ಸಿಂಧೂ ಮತ್ತು ನಯನ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿಹಿ ವಿತರಿಸಿ ಕಾರ್ಮಿಕರ ದಿನಾಚರಣೆ ಶುಭ ಕೋರಲಾಯಿತು.