ಕ್ರೈಸ್ತ ಮುಖಂಡ ಶಾಜಿ ನಿಧನ


ಶಾಜಿ 
    ಭದ್ರಾವತಿ: ನಗರದ ದೊಣಬಘಟ್ಟ ರಸ್ತೆ, ಕವಲಗುಂದಿ ನಿವಾಸಿ, ಕ್ಯಾಥೋಲಿಕ್ ಕ್ರೈಸ್ತ ಸಮಾಜದ ಮುಖಂಡ ಶಾಜಿ(೫೪) ಮಂಗಳವಾರ ನಿಧನ ಹೊಂದಿದರು. 
    ಪತ್ನಿ, ಪುತ್ರ ಇದ್ದಾರೆ. ಇವರ ಅಂತ್ಯಕ್ರಿಯೆ ಬುಧವಾರ ನ್ಯೂಟೌನ್ ಬೈಪಾಸ್ ರಸ್ತೆ ಕ್ಯಾಥೋಲಿಕ್ ಕ್ರೈಸ್ತರ ಸಮಾಧಿಯಲ್ಲಿ ನೆರವೇರಿಸಲಾಯಿತು. ಮೂಲತಃ ಕೇರಳದವರಾದ ಶಾಜಿ ನಗರಸಭೆ ೩ನೇ ವಾರ್ಡ್ ಸದಸ್ಯ ಎ. ಜಾರ್ಜ್‌ರವರ ಸಹೋದರಿಯನ್ನು ಮದುವೆಯಾಗಿದ್ದರು. ತಾಲೂಕು ಪಂಚಾಯಿತಿ ಸಮೀಪದ ನಿರ್ಮಲ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 
    ಶಾಜಿಯವರು ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ನಗರದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.