ಡಯಟ್ ಹಿರಿಯ ಉಪನ್ಯಾಸಕರಾಗಿ ಎ.ಕೆ ನಾಗೇಂದ್ರಪ್ಪ ಅಧಿಕಾರ ಸ್ವೀಕಾರ 


ಭದ್ರಾವತಿಯಲ್ಲಿ ಈ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಎ.ಕೆ ನಾಗೇಂದ್ರಪ್ಪ ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರ(ಡಯಟ್)ದ ಹಿರಿಯ ಉಪನ್ಯಾಸಕರಾಗಿ ಬುಧವಾರ ಅಧಿಕಾರ ವಹಿಸಿಕೊಂಡರು. 
    ಭದ್ರಾವತಿ: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರ(ಡಯಟ್)ದ ಹಿರಿಯ ಉಪನ್ಯಾಸಕರಾಗಿ ಎ.ಕೆ ನಾಗೇಂದ್ರಪ್ಪ ಬುಧವಾರ ಅಧಿಕಾರ ವಹಿಸಿಕೊಂಡರು. 
     ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಂದ್ರಪ್ಪ ಮಾರ್ಚ್ ತಿಂಗಳಿನಲ್ಲಿ ತಮ್ಮ ಕಛೇರಿಯಲ್ಲಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತರು ದಾಳಿ ನಡೆಸಿದ್ದರು. ಈ ಹಿನ್ನಲೆಯಲ್ಲಿ ಭ್ರಷ್ಟಾಚಾರದ ಆರೋಪದಡಿ ಅಮಾನತ್ತುಗೊಂಡಿದ್ದರು. ಪ್ರಸ್ತುತ ಅಮಾನತ್ತು ರದ್ದುಗೊಂಡಿದ್ದು,  ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ಸರಿಸಮಾನವಾದ ಹಿರಿಯ ಉಪನ್ಯಾಸಕರ ಹುದ್ದೆಯ ಅಧಿಕಾರ ವಹಿಸಿಕೊಂಡರು. 
    ಡಯಟ್ ಕಾಲೇಜಿನ ಪ್ರಾಚಾರ್ಯರಾದ ಎಚ್.ಆರ್ ಕೃಷ್ಣಮೂರ್ತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ,  ನಿವೃತ್ತ ಪ್ರಾಚಾರ್ಯ ಶಿವಬಸಪ್ಪ,  ತರೀಕೆರೆ ಎಸ್.ಜೆ.ಎಂ ಕಾಲೇಜಿನ ನಿವೃತ್ತ ನೌಕರ ಕಡದಕಟ್ಟೆ ರಾಜಶೇಖರ್, ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡರಾದ ಅತ್ತಿಗುಂದ ಕರಿಯಪ್ಪ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.