ಜನಪದ ಹುಟ್ಟಿದ್ದು ಹೆಣ್ಣಿಂದ : ಡಾ. ಸಾಸ್ವೆಹಳ್ಳಿ ಸತೀಶ್
ಎರಡು ದಿನಗಳ ಜನಪದ ಗೀತೆಗಳ ಕಲಿಕಾ ಶಿಬಿರ
ಭದ್ರಾವತಿ ತಾಲೂಕಿನ ಅಂತರಗಂಗೆ ಸಮುದಾಯ ಭವನದಲ್ಲಿ ಗ್ರಾಮೀಣ ಮಹಿಳೆಯರಿಗಾಗಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದಿಂದ ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವಿಶೇಷ ಘಟಕ ಧನ ಸಹಾಯ ಯೋಜನೆಯಡಿ ಎರಡು ದಿನಗಳ ಜನಪದ ಗೀತೆಗಳ ಕಲಿಕಾ ಶಿಬಿರ ಆಯೋಜಿಸಲಾಗಿತ್ತು.
ಭದ್ರಾವತಿ : ಜನಪದ ಹುಟ್ಟಿದ್ದೇ ಹೆಣ್ಣು ಮಕ್ಕಳಿಂದ. ಜನಪದ ನಮ್ಮ ಬದುಕು, ನಮ್ಮ ಸಂಪ್ರದಾಯ, ನಮ್ಮ ಸಂಸ್ಕಾರ, ನಮ್ಮ ಸಂಸ್ಕೃತಿಯಾಗಿದೆ ಎಂದು ತಾಲೂಕಿನ ಅಂತರಗಂಗೆ ಕೆಪಿಎಸ್ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ಸಾಸ್ವೆಹಳ್ಳಿ ಸತೀಶ್ ಹೇಳಿದರು.
ಅವರು ಅಂತರಗಂಗೆ ಸಮುದಾಯ ಭವನದಲ್ಲಿ ಗ್ರಾಮೀಣ ಮಹಿಳೆಯರಿಗಾಗಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದಿಂದ ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ವಿಶೇಷ ಘಟಕ ಧನ ಸಹಾಯ ಯೋಜನೆಯಡಿ ಆಯೋಜಿಸಲಾಗಿದ್ದ ಎರಡು ದಿನ ಜನಪದ ಗೀತೆಗಳ ಕಲಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
. ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ತನ್ನ ನೋವಿಗಾಗಿ ಹಾಡಿದ ಪದಗಳು, ತನ್ನ ಸಂತೋಷಕ್ಕಾಗಿ ಹಾಡಿದ ಪದಗಳು, ವ್ಯವಸಾಯ ಹಾಗೂ ಗದ್ದೆ ಕೆಲಸ ಮಾಡುವಾಗ ಹಾಡಿದ ಹಾಡುಗಳೇ ಜನಪದ ಹಾಡುಗಳು. ಈ ಹಿನ್ನಲೆಯಲ್ಲಿ ಜನಪದ ಹುಟ್ಟಿದ್ದೇ ಹೆಣ್ಣಿಂದ ಎಂದರು.
ಶಿಬಿರಾರ್ಥಿಗಳಾಗಿ ಸುಮಾರು ೩೦ ಜನ ಮಹಿಳೆಯರು ಭಾಗವಹಿಸಿದ್ದರು. ಜಾನಪದ ಕಲಾಸಂಘದ ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ೧. ಮುತ್ತು ಕಂಡೇನವ್ವ ತಂಗಿ, ೨. ಎಲ್ಲಿಗೆ ಮಾರವ್ವ ಮೆಲ್ಲಗೆ ನಿನ್ನ ಪಯಣ, ೩. ಚೆಲ್ಲಿದರು ಮಲ್ಲಿಗೆಯ, ೪. ಎತ್ತಿನ ಕೊರಳಿನ, ೫. ಬೆಳ್ಳಾನೆ ಎರಡೆತ್ತು ಮತ್ತು ೬. ಆವತ್ತ? ಈವತ್ತ? ಒಳ್ಳೇಂದತೀರಿ ಯಾವತ್ತ. ಸೇರಿದಂತೆ ಇನ್ನಿತರ ಜನಪದ ಗೀತೆಗಳನ್ನು ಎರಡು ದಿನಗಳ ಶಿಬಿರದಲ್ಲಿ ಶಿಬಿರಾರ್ಥಿಗಳು ಕಲಿಯುವ ಮೂಲಕ ಜನಪದ ಗೀತೆಗಳ ಕುರಿತು ಆಸಕ್ತಿ ಮೂಡಿಸಿಕೊಂಡರು. ಅಂತರಗಂಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಶ್, ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಕಲಾವಿದ ಶಿವಮೊಗ್ಗ ನಾಗರಾಜ್ ನೀಲ್ ಪಾಲ್ಗೊಂಡಿದ್ದರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ತಾಲೂಕಿನ ಅಂತರಗಂಗೆ ಕೆಪಿಎಸ್ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಎಂ. ಸತೀಶ, ವಿಕಸಂ ರಂಗಭೂಮಿ ಕಲಾವಿದ ಕೆ.ಎಸ್ ರವಿಕುಮಾರ್, ಜಾನಪದ ಕಲಾವಿದ ಜಿ. ದಿವಾಕರ ಮತ್ತು ಜಿ. ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಆಕಾಶವಾಣಿ ನಳಿನಕುಮಾರಿ ನಿರೂಪಿಸಿದರು. ವಿಶೇಷವಾಗಿ ಎರಡು ದಿನದ ಶಿಬಿರಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು, ಎಂಬಿಕೆ, ಪಶು ಸಖಿ, ಕೃಷಿ ಸಖಿ ಮತ್ತು ಎಲ್‌ಬಿಆರ್‌ಸಿ ಸೇರಿದಂತೆ ಇನ್ನಿತರರು ಹೆಚ್ಚಿನ ಸಹಕಾರ ನೀಡಿದರು.
