ಪವರ್ ಲಿಫ್ಟಿಂಗ್ ಸ್ಪರ್ಧೆ : ಕಾರ್ತಿಕ್‌ಗೆ ಕಂಚು
ಮಂಗಳೂರಿನ ಕಿನ್ನಗೊಳದಲ್ಲಿ ಜರುಗಿದ ಕರ್ನಾಟಕ ರಾಜ್ಯ ಪವರ್‌ಲಿಪ್ಪಿಂಗ್ ಪಂದ್ಯಾವಳಿಯಲ್ಲಿ ಭದ್ರಾವತಿ ಕ್ರೀಡಾಪಟು ಕಾರ್ತಿಕ್ ಭಾಗವಹಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಭದ್ರಾವತಿ: ಮಂಗಳೂರಿನ ಕಿನ್ನಗೊಳದಲ್ಲಿ ಜರುಗಿದ ಕರ್ನಾಟಕ ರಾಜ್ಯ ಪವರ್‌ಲಿಪ್ಪಿಂಗ್ ಪಂದ್ಯಾವಳಿಯಲ್ಲಿ ಕ್ರೀಡಾಪಟು ಕಾರ್ತಿಕ್ ಭಾಗವಹಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
೮೩ ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿ ಸ್ಕ್ವಾಟ್ ನಲ್ಲಿ ೨೫೫ ಕೆ.ಜಿ, ಬೆಂಚ್ ಪ್ರೆಸ್‌ನಲ್ಲಿ ೧೫೦ ಕೆ.ಜಿ ಮತ್ತು ಡೆಡ್ ಲಿಫ್ಟ್ ನಲ್ಲಿ ೨೪೫ ಕೆ.ಜಿ ಸೇರಿ ಒಟ್ಟು ೬೫೦ ಕೆ.ಜಿ ಭಾರ ಎತ್ತುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಕಂಚಿನ ಪದಕ ಗೆಲ್ಲುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಇವರು ತರಬೇತುದಾರರಾದ ರಾಕೇಶ್ ಉಪಾಧ್ಯಾಯ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದು, ಕುವೆಂಪು ವಿಶ್ವವಿದ್ಯಾಲಯದ ಲೀಲಾವತಿ ರಮೇಶ್ ರವರು ಪುತ್ರರಾಗಿದ್ದಾರೆ. ಕಾರ್ತಿಕ್ ನಗರದ ಗಣ್ಯರು, ಕ್ರೀಡಾಪಟುಗಳು ಕ್ರೀಡಾ ಅಭಿಮಾನಿಗಳು ಅಭಿನಂದಿಸಿದ್ದಾರೆ.
