ಮೇ.೧೦ರಂದು `ಆರೋಗ್ಯ ಭೂಮಿಕಾ' ಸಮಗ್ರ ಆರೋಗ್ಯ ಚಿಂತನ ಕಾರ್ಯಕ್ರಮ 


    ಭದ್ರಾವತಿ : ಕನ್ನಡ ನಾಡು ನಡೆ-ನುಡಿ ಬಿಂಬಿಸುವ ವೇದಿಕೆ ನಗರದ ಭೂಮಿಕಾ ತನ್ನ ೨೫ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಮೇ. ೧೦ರ ಭಾನುವಾರ ಸಂಜೆ ೫.೩೦ಕ್ಕೆ ಆರೋಗ್ಯ ಭೂಮಿಕಾ ಸಮಗ್ರ ಆರೋಗ್ಯ ಚಿಂತನ ಕಾರ್ಯಕ್ರಮ ಆಯೋಜಿಸಲಾಗಿದೆ. 
    ಶಿವಮೊಗ್ಗ ಪಾಸಿಟಿವ್ ಮೈಂಡ್ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ, ಮನಶಾಸ್ತ್ರಜ್ಞರಾದ ಡಾ. ವಿ.ಎಚ್ ಐಶ್ವರ್ಯ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದು, ನಗರದ ಸ್ತ್ರೀ ರೋಗ ತಜ್ಞೆ ಡಾ. ವೀಣಾ ಭಟ್ ಉಪಸ್ಥಿತರಿರುವರು. ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್ ಭಟ್, ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆ ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್, ಕೋಶಾಧ್ಯಕ್ಷ ಸಿ.ಎಲ್ ಮುನಿರಾಜ್ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದ್ದಾರೆ.