ನೂತನ ನ್ಯಾಯಾಧೀಶೆ ಅನನ್ಯ ಶಾಸ್ತ್ರಿಗೆ ಸನ್ಮಾನ 


ಭದ್ರಾವತಿ ನಗರದ ಜನ್ನಾಪುರ ಎಸ್.ಜೆ ರಸ್ತೆಯ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಅಭಿನಂದನಾ ಕಾರ್ಯಕ್ರಮವನ್ನು ನೂತನವಾಗಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ಅನನ್ಯ ಶಾಸ್ತ್ರಿ ಉದ್ಘಾಟಿಸಿದರು.  
    ಭದ್ರಾವತಿ : ನಗರದ ಜನ್ನಾಪುರ ಎಸ್.ಜೆ ರಸ್ತೆಯ ಗಾಯತ್ರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ನೂತನವಾಗಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ಅನನ್ಯ ಶಾಸ್ತ್ರಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
     ಅನನ್ಯ ಶಾಸ್ತ್ರಿಯವರು ಕೆಲವು ತಿಂಗಳ ಹಿಂದೆ ನ್ಯಾಯಾಧೀಶರ ಹುದ್ದೆ ಪರೀಕ್ಷೆಯಲ್ಲಿ ಅತಿಹೆಚ್ಚು  ಅಂಕಗಳನ್ನು ಪಡೆದು ಉತ್ತೀರ್ಣರಾಗುವ ಮೂಲಕ ಅತಿ ಚಿಕ್ಕ ವಯಸ್ಸಿನಲ್ಲಿಯೇ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದು, ಇವರ ಸಾಧನೆ ಸಮಾಜಕ್ಕೆ ಮಾದರಿಯಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಸನ್ಮಾನ ಸ್ವೀಕರಿಸಿದ ಅನನ್ಯ ಶಾಸ್ತ್ರಿಯವರು ತಮ್ಮ ಸಾಧನೆಯ ಹಾದಿಯನ್ನು ಸ್ಮರಿಸುವ ಮೂಲಕ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. 
    ಸೊಸೈಟಿ ಅಧ್ಯಕ್ಷೆ ಎಸ್. ಶ್ವೇತಾ ಅಧ್ಯಕ್ಷತೆ ವಹಿಸಿದ್ದರು.  ಸೊಸೈಟಿ ಮಾಜಿ ಅಧ್ಯಕ್ಷ ಆನಂದ ರಾವ್, ಉಪಾಧ್ಯಕ್ಷ ಡಿ. ಗುರುಪ್ರಸಾದ್, ಕಾರ್ಯದರ್ಶಿ ಎಂ.ವಿ ಶಶಿಧರ್, ನಿರ್ದೇಶಕರಾದ ಇಂದ್ರಸೇನರಾವ್, ಶ್ರೀವತ್ಸ, ಜಯತೀರ್ಥ, ಸಂತೋಷ್, ನಿಖಿಲ್, ಮಧುಕೇಶ್ ಹಾಗು ಪ್ರಗತಿ ಪ್ರಸಾದ್, ಜನ್ನಾಪುರ ಶ್ರೀ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ಕೃಷ್ಣಮೂರ್ತಿ ಸೋಮಯಾಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.