ಬಿ.ಎಸ್.ವೈ `ಅಭಿಮಾನೋತ್ಸವ' ಲಾಂಛನ ಬಿಡುಗಡೆ : ಸಂಭ್ರಮಾಚರಣೆ 



ಮಾಜಿ ಮುಖ್ಯಮಂತ್ರಿ, ರೈತ ನಾಯಕ, ಹೋರಾಟಗಾರ ಬಿ.ಎಸ್ ಯಡಿಯೂರಪ್ಪನವರ ಸಾರ್ವಜನಿಕ ಜೀವನದ ೫೦ ವರ್ಷಗಳ ಸಾರ್ಥಕ ಪಯಣದ ಅಂಗವಾಗಿ ಮೇ.೯ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ `ಅಭಿಮಾನೋತ್ಸವ' ಕಾರ್ಯಕ್ರಮದ ಲಾಂಛನ(ಲೋಗೋ) ಶುಕ್ರವಾರ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಭದ್ರಾವತಿ ರಂಗಪ್ಪ ವೃತ್ತದಲ್ಲಿ ವಾಹನಗಳಿಗೆ ಅಂಟಿಸುವ ಮೂಲಕ ಬಿಡುಗಡೆಗೊಳಿಸಿದರು. 
    ಭದ್ರಾವತಿ : ಮಾಜಿ ಮುಖ್ಯಮಂತ್ರಿ, ರೈತ ನಾಯಕ, ಹೋರಾಟಗಾರ ಬಿ.ಎಸ್ ಯಡಿಯೂರಪ್ಪನವರ ಸಾರ್ವಜನಿಕ ಜೀವನದ ೫೦ ವರ್ಷಗಳ ಸಾರ್ಥಕ ಪಯಣದ ಅಂಗವಾಗಿ ಮೇ.೯ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ `ಅಭಿಮಾನೋತ್ಸವ' ಕಾರ್ಯಕ್ರಮದ ಲಾಂಛನ(ಲೋಗೋ) ಶುಕ್ರವಾರ ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ವಾಹನಗಳಿಗೆ ಅಂಟಿಸುವ ಮೂಲಕ ಬಿಡುಗಡೆಗೊಳಿಸಿದರು. 
    ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ಪಕ್ಷದ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿ ನಂತರ ರಂಗಪ್ಪ ವೃತ್ತದಲ್ಲಿ `ಅಭಿಮಾನೋತ್ಸವ' ಕಾರ್ಯಕ್ರಮದ ಲಾಂಛನ ವಾಹನಗಳಿಗೆ ಅಂಟಿಸಿ ಕಾರ್ಯಕರ್ತರಿಗೆ, ಯಡಿಯೂರಪ್ಪ ಅವರ ಅಭಿಮಾನಿಗಳಿಗೆ ಹಾಗೂ  ಸಾರ್ವಜನಿಕರಿಗೆ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಆತ್ಮೀಯ ಆಮಂತ್ರಣ ನೀಡಿ ಸಂಭ್ರಮಿಸಲಾಯಿತು. 
    ಪಕ್ಷದ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ಪ್ರಮುಖರಾದ ಮಂಗೋಟೆ ರುದ್ರೇಶ್, ಜಿ. ಆನಂದ ಕುಮಾರ್, ಕೂಡ್ಲಿಗೆರೆ ಹಾಲೇಶ್,  ಎಂ. ಮಂಜುನಾಥ್, ರಾಮಲಿಂಗಯ್ಯ, ಮಂಡಲಗಳ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ರಘುರಾವ್, ಮೊಸರಳ್ಳಿ ಅಣ್ಣಪ್ಪ, ಹನುಮಂತನಾಯ್ಕ್, ಬಿಎಲ್‌ಎ ೧ ಎಂ.ಎಸ್ ಸುರೇಶಪ್ಪ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಗೌಡರ್, ನಂಜಪ್ಪ, ರಾಜಶೇಖರ್, ಕಾ.ರಾ ನಾಗರಾಜ್, ಧನುಷ್ ಬೋಸ್ಲೆ, ಪ್ರಜ್ವಲ್ ನಂಜುಂಡಯ್ಯ, ಸತೀಶ್ ಕುಮಾರ್, ಶಿವಮೂರ್ತಿ, ವಸಂತ್ ಪೂಜಾರಿ, ಸತ್ಯನಾರಾಯಣ್, ಮಹಿಳಾ ಕಾರ್ಯಕರ್ತರಾದ ಕವಿತಾ ರಾವ್, ಪ್ರೇಮ ಮಂಜುನಾಥ್, ಜಯಲಕ್ಷ್ಮಿ ಅಂಬರೀಶ್ ಇನ್ನಿತರರು ಪಾಲ್ಗೊಂಡಿದ್ದರು.