ಶ್ರೀ ಗುಳ್ಳಮ್ಮ ದೇವಸ್ಥಾನದಲ್ಲಿ ವಾರ್ಷಿಕೋತ್ಸವ, ಹೋಮ-ಹವನ
ಭದ್ರಾವತಿ ನಗರದ ರಂಗಪ್ಪ ವೃತ್ತ, ಶ್ರೀ ಗುಳ್ಳಮ್ಮ ಸೇವಾ ಟ್ರಸ್ಟ್ ವತಿಯಿಂದ ತಾಲೂಕಿನ ದೇವರಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿ ಮತ್ತು ಕೋಮಾರನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವರು ಉಪಸ್ಥಿತಿಯಲ್ಲಿ ವಾರ್ಷಿಕೋತ್ಸವ ಹಾಗು ಚಂಡಿಕಾ ಹೋಮ ಮತ್ತು ಗಣ ಹೋಮ ಸೇರಿದಂತೆ ಧಾರ್ಮಿಕ ಆಚರಣೆಗಳು ಜರುಗಿದವು.
ಭದ್ರಾವತಿ : ನಗರದ ರಂಗಪ್ಪ ವೃತ್ತ, ಶ್ರೀ ಗುಳ್ಳಮ್ಮ ಸೇವಾ ಟ್ರಸ್ಟ್ ವತಿಯಿಂದ ತಾಲೂಕಿನ ದೇವರಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿ ಮತ್ತು ಕೋಮಾರನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವರು ಉಪಸ್ಥಿತಿಯಲ್ಲಿ ವಾರ್ಷಿಕೋತ್ಸವ ಹಾಗು ಚಂಡಿಕಾ ಹೋಮ ಮತ್ತು ಗಣ ಹೋಮ ಸೇರಿದಂತೆ ಧಾರ್ಮಿಕ ಆಚರಣೆಗಳು ಜರುಗಿದವು.
ಶ್ರೀ ಗುಳ್ಳಮ್ಮ ದೇವಸ್ಥಾನ ತನ್ನದೇ ಆದ ಪರಂಪರೆ ಹೊಂದಿದ್ದು, ಪ್ರಮುಖ ವಾಣಿಜ್ಯ ರಸ್ತೆಯ ಕಟ್ಟಡಗಳ ನಡುವೆ ನಿರ್ಮಾಣಗೊಂಡಿದೆ. ದೇವಸ್ಥಾನ ಸೇವಾ ಟ್ರಸ್ಟ್ ಹಂತ ಹಂತವಾಗಿ ದೇವಸ್ಥಾನದ ಜೀರ್ಣೋದ್ದಾರಕ್ಕೆ ಮುಂದಾಗುತ್ತಿದೆ. ಈ ಬಾರಿ ವಿಶೇಷವಾಗಿ ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳ ಜೊತೆಗೆ ವಾರ್ಷಿಕೋತ್ಸವ ಕೈಗೊಂಡಿತ್ತು.
ಉದ್ಯಮಿ ಡಾ. ಎನ್‌ಟಿಸಿ ನಾಗೇಶ್, ಯುವ ಮುಖಂಡ ಬಿ.ಎಸ್ ಬಸವೇಶ್, ನಿವೃತ್ತ ಬ್ಯಾಂಕ್ ಉದ್ಯೋಗಿ ಮಲ್ಲಿಕಾರ್ಜುನ ರಾವ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ. ಮಂಜುನಾಥ್, ತಾಯಿ ನೆರಳು ಕನ್ಟ್ರಕ್ಷನ್ ಮಾಲೀಕ ಹಾಲೇಶ್, ಬಿಜೆಪಿ ಮುಖಂಡ ಎಂ. ಮಂಜುನಾಥ್, ಅಕ್ಕಿಬಾಬು, ಹಳೇನಗರ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್, ದೌಲತ್‌ರಾವ್ ಗಾಯಕ್ವಾಡ್, ಟ್ರಸ್ಟ್ ಆಡಳಿತ ಮಂಡಳಿ ಸದಸ್ಯರಾದ ಶಿವಾಜಿರಾವ್ ಸಾಳಂಕೆ, ಮಂಜುನಾಥರಾವ್ ಮಿಸಾಳ್, ಹನುಮಂತರಾವ್ ಗಾಯಕ್ವಾಡ್, ಅರ್ಜುನ್‌ರಾವ್ ಜಾಧವ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.
