ಜೂ.೨೦ರಂದು `ಪರಿಸರ ವ್ಯಸ್ತಿ-ಸಮಸ್ಟಿ' ವಿಶೇಷ ಕಾರ್ಯಕ್ರಮ 


ಭದ್ರಾವತಿ : ಕನ್ನಡ ನಾಡು ನಡೆ-ನುಡಿ ಬಿಂಬಿಸುವ ನಗರದ ಭೂಮಿಕಾ ವೇದಿಕೆಯಿಂದ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘದ ಸಹಯೋಗದೊಂದಿಗೆ ಜೂ.೨೦ರ ಶನಿವಾರ ಸಂಜೆ ೬ ಗಂಟೆಗೆ `ಪರಿಸರ ವ್ಯಷ್ಟಿ-ಸಮಸ್ಟಿ' ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಹಳೇನಗರದ ಶ್ರೀ ರಾಮೇಶ್ವರ ದೇವಸ್ಥಾನ ಹಿಂಭಾಗ ಶ್ರೀ ಗಾಯಿತ್ರಿ ಧರ್ಮ ಶಾಲಾ ಭವನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಶಿವಮೊಗ್ಗ ತಜ್ಞ ವೈದ್ಯ ಹಾಗು ಪರಿಸರ ಸ್ನೇಹಿ ಡಾ. ರತ್ನಾಕರ್, ಭಾರತೀ ವೈದ್ಯಕೀಯ ಸಂಘದ ತಾಲೂಕು ಶಾಖೆ ಅಧ್ಯಕ್ಷ ಡಾ. ಡಿ. ಮಂಜುನಾಥನ್ ಉಪಸ್ಥಿತರಿರುವರು.
    ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್ ಭಟ್ ಅಧ್ಯಕ್ಷತೆವಹಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದ್ದಾರೆ.