ಜೂ.೨೩ರಂದು ವಿದ್ಯುತ್ ವ್ಯತ್ಯಯ 


    ಭದ್ರಾವತಿ : ಮೆಸ್ಕಾಂ ಗ್ರಾಮೀಣ ಉಪವಿಭಾಗದ ಘಟಕ-೧ರ ಶಾಖಾ ವ್ಯಾಪ್ತಿಯಲ್ಲಿ ಮಾರ್ಗಗಳ ತುರ್ತು ಕಾಮಗಾರಿ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಜೂ.೨೩ರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಅರಳಿಕೊಪ್ಪ, ರಬ್ಬರ್ ಕಾಡು, ಬಾಳೆಮಾರನಹಳ್ಳಿ, ಸುಲ್ತಾನ್‌ಮಟ್ಟಿ, ತಾರೀಕಟ್ಟೆ, ಹೊಳೆಗಂಗೂರು, ಚಿಕ್ಕಗೊಪ್ಪೇನಹಳ್ಳಿ, ಗೊಂದಿ, ಕಾಳನಕಟ್ಟೆ, ಹಿರಿಯೂರು, ಹೊನ್ನೆಗುಡ್ಡ ನೀರು ಸರಬರಾಜು ಕೇಂದ್ರ, ಕಂಬದಾಳ್ ಹೊಸೂರು, ಹೊನ್ನಟ್ಟಿ ಹೊಸೂರು ಕ್ಯಾಂಪ್, ಜಂಕ್ಷನ್ ನೀರು ಸರಬರಾಜು ಕೇಂದ್ರ ಸಿದ್ದರಹಳ್ಳಿ, ಹುಣಸೇಕಟ್ಟೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.