ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ : ಶಾರದ ಅಪ್ಪಾಜಿ



ಭದ್ರಾವತಿ ನಗರದ ಅಪ್ಪರ್‌ಹುತ್ತಾದಲ್ಲಿ ಶನಿವಾರ ಪ್ರತಿವರ್ಷದಂತೆ ಈ ಬಾರಿ ಸಹ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

    ಭದ್ರಾವತಿ : ನಾಡಪ್ರಭು ಕೆಂಪೇಗೌಡರು ನಾಡುಕಂಡ ಅಪ್ರತಿಮ ನಾಯಕರಾಗಿದ್ದು, ಇಂತಹ ನಾಯಕನ ಆದರ್ಶತನಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಹೇಳಿದರು.

    ಅವರು ಶನಿವಾರ ನಗರದ ಅಪ್ಪರ್ ಹುತ್ತಾದಲ್ಲಿ  ಪ್ರತಿವರ್ಷದಂತೆ ಈ ಬಾರಿ ಸಹ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ವೇದಿಕೆ ಅಧ್ಯಕ್ಷ, ನ್ಯಾಯವಾದಿ ಟಿ. ಚಂದ್ರೇಗೌಡ ಮಾತನಾಡಿ, ಈ ನಾಡಿಗೆ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ವೇದಿಕೆ ವತಿಯಿಂದ ಕೆಂಪೇಗೌಡರ ಜಯಂತಿ ಪ್ರತಿ ವರ್ಷ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಕ್ಕಲಿಗರು ತಮ್ಮ ಶಕ್ತಿ ಪ್ರದರ್ಶಿಸಬೇಕಾಗಿದೆ ಎಂದರು.

    ಜಯಂತಿ ಅಂಗವಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಪ್ಪರ್ ಹುತ್ತಾ ಕಾಲೋನಿ, ಲೋಯರ್ ಹುತ್ತಾ, ಗೋಲ್ಡನ್ ಜ್ಯೂಬಿಲಿ, ಜಿಂಕ್‌ಲೈನ್, ಜನ್ನಾಪುರ ಸೇರಿದಂತೆ ನಗರದ ವಿವಿಧೆಡೆ ಒಕ್ಕಲಿಗ ಸಮುದಾಯದವರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ನಾಡಪ್ರಭು ಕೆಂಪೇಗೌಡ ಅಭಿಮಾನಿಗಳು ಪಾಲ್ಗೊಂಡಿದ್ದರು.

    ವೇದಿಕೆ ಪ್ರಧಾನ ಕಾರ್ಯದರ್ಶಿ, ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ, ಉಪಾಧ್ಯಕ್ಷ ಬಿ.ಎನ್ ಮಹಾದೇವ, ಕೆ. ಶಶಿಕುಮಾರ್, ಖಜಾಂಚಿ ವೆಂಕಟೇಶ್, ಗೊಂದಿ ಜಯರಾಂ, ಜೆಡಿಎಸ್ ಮುಖಂಡರಾದ ಭಾಗ್ಯಮ್ಮ, ನಗರಸಭೆ ಸದಸ್ಯರಾದ ನಾಗರತ್ನ ಅನಿಲ್ ಕುಮಾರ್, ಕೆ.ಆರ್ ಸವಿತಾ ಉಮೇಶ್, ಪತ್ರಕರ್ತ ಸುರೇಶ್, ಡಿಎಸ್‌ಎಸ್ ಮುಖಂಡ ಚಿನ್ನಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.