ಸ್ಕಂದ ಟ್ರಸ್ಟ್‌ನಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಬರವಣಿಗೆ ಪುಸ್ತಕ, ಲೇಖನ ಸಾಮಗ್ರಿ ವಿತರಣೆ
ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಜಯಶ್ರೀ ವೃತ್ತದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸ್ಕಂದ ಟ್ರಸ್ಟ್ ಉಚಿತ ಬರವಣಿಗೆ ಪುಸ್ತಕ ಹಾಗು ಲೇಖನ ಸಾಮಗ್ರಿಗಳನ್ನು ಶನಿವಾರ ವಿತರಿಸಲಾಯಿತು.
ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ ಜಯಶ್ರೀ ವೃತ್ತದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸ್ಕಂದ ಟ್ರಸ್ಟ್ ಉಚಿತ ಬರವಣಿಗೆ ಪುಸ್ತಕ ಹಾಗು ಲೇಖನ ಸಾಮಗ್ರಿಗಳನ್ನು ಶನಿವಾರ ವಿತರಿಸಲಾಯಿತು.
ಸಾಮಾಜಿಕ ಸೇವಾ ಮನೋಭಾವನೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಸ್ಕಂದ ಟ್ರಸ್ಟ್ ಸರ್ಕಾರಿ ಶಾಲೆ ಮಕ್ಕಳ ಕಲಿಕೆಗೆ ನೆರವಾಗುವ ಮೂಲಕ ಮಾದರಿಯಾಗಿದೆ.
ಬಿಜೆಪಿ ಮಂಡಲ ನಗರ ಅಧ್ಯಕ್ಷ ಜಿ. ಧರ್ಮಪ್ರಸಾದ್, ಶ್ರೀಧರ್, ಶಾಂತಕುಮಾರ್, ನಾರಾಯಣ, ಮಧುಸೂದನ ಮತ್ತು ಶಾಲೆಯ ಶಿಕ್ಷಕ ಹಾಗು ಸಿಬ್ಬಂದಿ ವೃಂದದವರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.
