ಎಸ್‌ಎಸ್‌ಎಲ್‌ಸಿ ಪರೀಕ್ಷೆ :  ಹುಣಸೇಕಟ್ಟೆ ಕೆಪಿಎಸ್ ಶಾಲೆಗೆ ಶೇ.೯೫ರಷ್ಟು ಫಲಿತಾಂಶ


ಎಸ್. ವಿರೂಪಾಕ್ಷಪ್ಪ 
    ಭದ್ರಾವತಿ: ತಾಲೂಕಿನ ಗ್ರಾಮೀಣ ಭಾಗದ ಹುಣಸೇಕಟ್ಟೆ ಗ್ರಾಮದಲ್ಲಿರುವ ಕರ್ನಾಟಕ ದತ್ತು ಪಬ್ಲಿಕ್ ಸ್ಕೂಲ್(ಕೆಪಿಎಸ್ ಶಾಲೆ) ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೯೫ರಷ್ಟು ಉತ್ತಮ ಫಲಿತಾಂಶ ಪಡೆದುಕೊಂಡಿದೆ. 
    ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಈ ಶಾಲೆ ಹಂತ ಹಂತವಾಗಿ ಪ್ರಗತಿ ಸಾಧಿಸುತ್ತಿದ್ದು, ೨೦೧೦ ರಿಂದ ನಿರಂತರವಾಗಿ ಮುನ್ನಡೆ ಕಾಯ್ದುಕೊಂಡು ಬಂದಿದೆ. ೨೦೧೧-೧೨ನೇ ಸಾಲಿನಲ್ಲಿ ಶೇ.೮೮.೨೩ರಷ್ಟು ಪ್ರಗತಿ ಸಾಧಿಸಿದ್ದ ಶಾಲೆ ಇದೀಗ ಶೇ.೯೫ ರಷ್ಟು ಅತಿ ಹೆಚ್ಚಿನ ಫಲಿತಾಂಶ ಪಡೆದಿರುವುದು ಹೆಮ್ಮೆಯ ವಿಚಾರವಾಗಿದೆ. 
    ಗುಣಮಟ್ಟದ ಶಿಕ್ಷಣ ನೀಡಿತ್ತಿರುವ ಶಾಲೆಯ ಬೆಳವಣಿಗೆಗೆ ಪ್ರತಿಯೊಬ್ಬರು ಕೈಜೋಡಿಸುವ ಜೊತೆಗೆ ಮಕ್ಕಳನ್ನು ಈ ಶಾಲೆಗೆ ದಾಖಲಿಸುವಂತೆ ಗ್ರಾಮದ ಮುಖಂಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಸ್. ವಿರೂಪಾಕ್ಷಪ್ಪ ಕೋರಿದ್ದಾರೆ.