ಲಿಯಾಕತ್-ನೆಹರು ಒಪ್ಪಂದ ದುಷ್ಪರಿಣಾಮ ಆರಂಭದಲ್ಲಿಯೇ ಕಂಡುಕೊಂಡಿದ್ದ ಶ್ಯಾಮಪ್ರಸಾದ್ ಮುಖರ್ಜಿ : ಜಿ. ಧರ್ಮಪ್ರಸಾದ್
ಭದ್ರಾವತಿಯಲ್ಲಿ ಬಿಜೆಪಿ ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲದಿಂದ ದೇಶದ ಅಖಂಡತೆಗೆ ಶ್ರಮಿಸಿದ ನಾಯಕ, ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿದರು.
ಭದ್ರಾವತಿ: ಭಾರತೀಯ ಜನಸಂಘದ ಸಂಸ್ಥಾಪಕರಾದ ಶ್ಯಾಮಪ್ರಸಾದ್ ಮುಖರ್ಜಿಯವರು ಮಹಾನ್ ದಾರ್ಶನಿಕರು. ಲಿಯಾಕತ್-ನೆಹರು ಒಪ್ಪಂದದಿಂದ ಭವಿಷ್ಯದಲ್ಲಿ ಉಂಟಾಗುವ ದುಷ್ಪರಿಣಾಮ ಒಪ್ಪಂದದ ಸಂದರ್ಭದಲ್ಲಿಯೇ ಮುಖರ್ಜಿ ಕಂಡುಕೊಂಡಿದ್ದರು ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು.
ಅವರು ಮಂಗಳವಾರ ಪಕ್ಷದ ನಗರ ಹಾಗೂ ಗ್ರಾಮಾಂತರ ಮಂಡಲದಿಂದ ದೇಶದ ಅಖಂಡತೆಗೆ ಶ್ರಮಿಸಿದ ನಾಯಕ, ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪೂರ್ವ ಪಾಕಿಸ್ತಾನ ಇಂದಿನ ಬಾಂಗ್ಲಾದೇಶದಲ್ಲಿ ಇಂದಿಗೂ ಹಿಂದುಗಳ ನರಮೇಧ ನಡೆಯುತ್ತಿದೆ. ಆರ್ಟಿಕಲ್ ೩೭೦ ವಿಧಿ ಅಸಂವಿಧಾನಿಕ. ಒಂದು ದೇಶದಲ್ಲಿ ಎರಡು ಸಂವಿಧಾನ, ಎರಡು ಪ್ರಧಾನಿ, ಎರಡು ಚಿನ್ನೆ ನಡೆಯುವುದಿಲ್ಲ ಎಂಬುದನ್ನು ಪ್ರತಿಪಾದಿಸಿದ್ದರು. ಈ ನಿಟ್ಟಿನಲ್ಲಿಯೇ ತಮ್ಮ ಬದುಕಿನ ಕೊನೆಯವರೆಗೂ ಹೋರಾಟ ನಡೆಸಿ ತಮ್ಮ ಪ್ರಾಣ ಸಮರ್ಪಿಸಿಕೊಂಡಿದ್ದರು. ಇಂತಹ ನಾಯಕನನ್ನು ಸ್ಮರಿಸುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪಕ್ಷದ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆಎಚ್ ತೀರ್ಥಯ್ಯ, ಶಿವಮೊಗ್ಗ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಮಧುರ ಶಿವಾನಂದ ಉಪಸ್ಥಿತರಿದ್ದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಸರಸ್ವತಿ ವಿಜಯಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಲತಾ ಭೂಪಾಳಂ, ಜಿಲ್ಲಾ ಪ್ರಮುಖರಾದ ಪುಷ್ಪಲತಾ, ವಿನುತಾ ಶಾಸ್ತ್ರೀ, ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ರಘುರಾವ್, ಮೊಸರಳ್ಳಿ ಅಣ್ಣಪ್ಪ, ಹನುಮಂತ ನಾಯ್ಕ, ಬಿಎಲ್‌ಎ-೧ ಎಂ.ಎಸ್ ಸುರೇಶಪ್ಪ, ಸುಲೋಚನಾ ಪ್ರಕಾಶ್, ಕವಿತಾರಾವ್, ವೆಂಕಟೇಶ್ ಆರ್ ಪಿ, ಧನುಷ್ ಬೋಸ್ಲೆ, ರುದ್ರೇಶ್ ಜಾವಳಿ, ಲೋಲಾಕ್ಷಿ ರಾಜಗುರು, ವಿವಿಧ ಮೋರ್ಚಾಗಳ ಅಧ್ಯಕ್ಷರುಗಳಾದ ರಾಜಶೇಖರ್ ಉಪ್ಪಾರ್, ಅನ್ನಪೂರ್ಣ, ಶಕುಂತಲಾ ಪ್ರದೀಪ್, ನಾಗಮಣಿ, ರುಕ್ಮಿಣಿ, ಜಯಲಕ್ಷ್ಮಿ, ಉಮಾವತಿ. ಆರತಿ ಸಿಂಗ್, ಸುಪ್ರಿಯಾ ಮಂಜುನಾಥ್, ಅನಸೂಯಾ, ಚರಣ್ ಕುಮಾರ್ ಮಂಡಲ ಹಾಗೂ ಮೋರ್ಚಾದ ಕಾರ್ಯಕರ್ತರು ಪಾಲ್ಗೊಂಡಿದ್ದರು.
