ಓ.ಸಿ ಮಟ್ಕಾ ಜೂಜಾಟ : ವ್ಯಕ್ತಿ ವಿರುದ್ಧ ಪ್ರಕರಣ ದಾಖಲಲು
ಭದ್ರಾವತಿ: ನಗರಸಭೆ ವ್ಯಾಪ್ತಿಯ ಹಳೇಬುಳ್ಳಾಪುರದಿಂದ ಜೆಪಿಎಸ್ ಕಡೆಗೆ ಹೋಗುವ ರಸ್ತೆಯಲ್ಲಿ ಓ.ಸಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
ಪೇಪರ್ ಟೌನ್ ಪೊಲೀಸ್ ಠಾಣೆಯ ಗುಪ್ತ ಮಾಹಿತಿ ಕರ್ತವ್ಯದ ಸಿಬ್ಬಂದಿ ಎಸ್.ಎಲ್ ಭರತ್ ಖಚಿತ ಮಾಹಿತಿ ಮೇರೆಗೆ ಜೂ.೬ರಂದು ಮಧ್ಯಾಹ್ನ ೨.೪೫ರ ವೇಳೆ ಹಳೇಬುಳ್ಳಾಪುರದಿಂದ ಜೆಪಿಎಸ್ ಕಡೆಗೆ ಹೋಗುವ ರಸ್ತೆಯಲ್ಲಿ ಆಂಜನೇಯ ದೇವಸ್ಥಾನದ ಮುಂಭಾಗದ ಅರಳಿ ಮರದ ಕಟ್ಟೆ ಬಳಿ ಬೊಮ್ಮನಕಟ್ಟೆ ನಿವಾಸಿ ಹುಸೇನ್ ಪಾಷ ಎಂಬಾತ ಜನರನ್ನು ಸೇರಿಸಿಕೊಂಡು ಓ.ಸಿ ಮಟ್ಕಾ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದೆ. ಆತನನ್ನು ವಶಕ್ಕೆ ಪಡೆದು ನ್ಯಾಯಾಲಯದ ಅನುಮತಿ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
