ಜೂ.೨೭ರಂದು ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ನೂತನ ಅಧ್ಯಕ್ಷರಾಗಿ ಡಿ. ಶಂಕರಮೂರ್ತಿ, ಕಾರ್ಯದರ್ಶಿಯಾಗಿ ವಿನೋದ್ ಗಿರಿ



ಡಿ. ಶಂಕರಮೂರ್ತಿ

ಭದ್ರಾವತಿ : ನಗರದ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಡಿ. ಶಂಕರಮೂರ್ತಿ ಮತ್ತು ಕಾರ್ಯದರ್ಶಿಯಾಗಿ ವಿನೋದ್ ಗಿರಿ ಜೂ.೨೭ರ ಶನಿವಾರ ಸಂಜೆ ೬.೩೦ಕ್ಕೆ ಪದಗ್ರಹಣ ಸ್ವೀಕರಿಸಲಿದ್ದಾರೆ.

     ಲಯನ್ಸ್ ೩೧೭ಸಿ ಜಿಲ್ಲಾ ಗೌರ್‍ನರ್ ಎಚ್.ಎನ್ ಶಿವಕುಮಾರ್ ಪದಗ್ರಹಣ ಬೋಧಿಸಲಿದ್ದು, ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ಗೌರ್‍ನರ್ ಬಿ. ದಿವಾಕರ ಶೆಟ್ಟಿ ಉಪಸ್ಥಿತರಿರುವರು.



ವಿನೋದ್ ಗಿರಿ

    ಲಯನ್ಸ್ ಕ್ಲಬ್ ೨೦೨೬-೨೭ನೇ ಸಾಲಿನ ಅಧ್ಯಕ್ಷರಾಗಿ ಡಿ. ಶಂಕರಮೂರ್ತಿ, ಕಾರ್ಯದರ್ಶಿಯಾಗಿ ವಿನೋದ್ ಗಿರಿ, ಖಜಾಂಚಿಯಾಗಿ ಎಚ್.ಎಸ್ ಮಂಜುನಾಥ್, ಲಿಯೋ ಕ್ಲಬ್ ಅಧ್ಯಕ್ಷರಾಗಿ ಪಿ. ಧೃವ, ಕಾರ್ಯದರ್ಶಿಯಾಗಿ ಜೆ. ಸಿರಿ ಮತ್ತು ಖಜಾಂಚಿಯಾಗಿ ಎಸ್. ಹರ್ಷ ಪದಗ್ರಹಣ ಸ್ವೀಕರಿಸಲಿದ್ದಾರೆ. ಕ್ಲಬ್ ಸದಸ್ಯರು, ಕುಟುಂಬ ವರ್ಗದವರು, ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

 

ಎಚ್.ಎಸ್ ಮಂಜುನಾಥ್