ಭದ್ರಾವತಿಯಲ್ಲಿ ಶಾಲಾ-ಕಾಲೇಜು ಸೇರಿದಂತೆ ವಿವಿಧೆಡೆ ವಿಶ್ವ ಪರಿಸರ ದಿನಾಚರಣೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ಭದ್ರಾವತಿ ನಗರದ ಹೊಸೇತುವೆ ರಸ್ತೆಯ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
ಭದ್ರಾವತಿ : ನಗರದ ವಿವಿಧೆಡೆ ಶಾಲಾ-ಕಾಲೇಜು, ಸರ್ಕಾರಿ ಕಛೇರಿಗಳು, ವಿವಿಧ ಸಂಘ-ಸಂಸ್ಥೆಗಳಿಂದ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಿ ಅರಿವು ಮೂಡಿಸುವ ಜೊತೆಗೆ ಪರಿಸರ ರಕ್ಷಣೆಗೆ ಜಾಗೃತಿವಹಿಸುವಂತೆ ಕರೆ ನೀಡಲಾಯಿತು.
ಹೆಬ್ಬೂರು ಮಹಾವಿದ್ಯಾಲಯ:
ತಾಲೂಕು ಉಚಿತ ಕಾನೂನು ಸೇವಾ ಸಮಿತಿ ಹಾಗು ತಾಲೂಕು ವಕೀಲರ ಸಂಘ ಮತ್ತು ಅರಣ್ಯ ಇಲಾಖೆ ನೇತೃತ್ವದಲ್ಲಿ ನಗರದ ಕೆಎಸ್‌ಆರ್‌ಟಿಸಿ ಬಸ್ ಘಟಕದ ಸಮೀಪದ ಡಿ.ಕೆ ಶಿವಕುಮಾರ್ ಹೆಬ್ಬೂರು ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಜೆಎಂಎಫ್‌ಸಿ ಕಿರಿಯ ವಿಭಾಗದ ಹಿರಿಯ ನ್ಯಾಯಾಧೀಶರಾದ ರವಿಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಮಹಾವಿದ್ಯಾಲಯದ ಜಿ.ಆರ್ ಹೆಬ್ಬೂರು, ವಲಯ ಅರಣ್ಯಾಧಿಕಾರಿಗಳಾದ ಕೆ.ಆರ್ ರಾಜೇಶ್, ಬಿ.ಆರ್ ದಿನೇಶ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು, ವಕೀಲರು ಹಾಗು ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವಿಶ್ವೇಶ್ವರಾಯ ವಿದ್ಯಾಸಂಸ್ಥೆ :
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತ ನಗರದ ಹೊಸೇತುವೆ ರಸ್ತೆಯ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾ ಸಂಸ್ಥೆಯ ಆಡಳಿತಧಿಕಾರಿಗಳಾದ ಡಾ. ಎಸ್.ಪಿ ರಾಕೇಶ್‌ರವರು ಮಕ್ಕಳಿಂದ ಸಸಿಗಳನ್ನು ಸ್ವೀಕರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ವಿದ್ಯಾರ್ಥಿಗಳು ಪರಿಸರ ದಿನಾಚರಣೆಯ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಕಲೆ ಪ್ರದರ್ಶನ ಮಾಡಿದರು. ಅಲ್ಲದೆ ಪರಿಸರ ದಿನಾಚರಣೆ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ಎಲ್ಲಾ ವಿಭಾಗಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ಹಾಗು ಸಿಬ್ಬಂದಿ ವೃಂದದವರು ಉಪಸ್ಥಿತರಿದ್ದರು.
ಭದ್ರಾವತಿ ತಾಲೂಕಿನ ಗ್ರಾಮೀಣ ಭಾಗದ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಲ್ತಾನಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸಸಿಗಳನ್ನು ನೆಟ್ಟು ನೀರು ಹಾಕುವ ಮೂಲಕ ಮಕ್ಕಳು ಸಂಭ್ರಮಿಸಿದರು.
ಸುಲ್ತಾನಮಟ್ಟಿ ಸರ್ಕಾರಿ ಶಾಲೆ:
ತಾಲೂಕಿನ ಗ್ರಾಮೀಣ ಭಾಗದ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಲ್ತಾನಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸಸಿಗಳನ್ನು ನೆಟ್ಟು ನೀರು ಹಾಕುವ ಮೂಲಕ ಮಕ್ಕಳು ಸಂಭ್ರಮಿಸಿದರು.
ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ, ಶಿಕ್ಷಕಿ ಸೆರೆನಾ, ವರ್ಷ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಕೇಶ್, ಸದಸ್ಯ ಮಹಮ್ಮದ್ ಹುಸೇನ್, ಅಂಗನವಾಡಿ ಶಿಕ್ಷಕಿ ಶೋಭಾ, ಬತ್ತಮ್ಮ, ಪುಷ್ಪಮ್ಮ. ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಪರಿಸರ ಕಾಳಜಿ ಯ ದಿನ
ಯರೇಹಳ್ಳಿ ಸರ್ಕಾರಿ ಶಾಲೆ:
ತಾಲೂಕಿನ ಯರೇಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು. ಪರಿಸರ ದಿನ ಹೊಸ ಉತ್ಸಾಹಕ್ಕೆ ನಾಂದಿ ಹಾಡಿತು. ಮಕ್ಕಳು ಹೂವಿನ ಗಿಡಗಳನ್ನು ಮೆರವಣಿಗೆ ಮೂಲಕ ತಂದು ಶಾಲಾ ಆವರಣದಲ್ಲಿ ನೆಟ್ಟು ಸಂಭ್ರಮಿಸಿದರು. ಅಲ್ಲದೆ ಪರಿಸರ ರಕ್ಷಣೆ ನಮ್ಮ ಹೊಣೆ ಪ್ರಬಂಧ ಬರೆದು ಶಾಲಾ ಆವರಣ ಸ್ವಚ್ಛ ಗೊಳಿಸಿ ಪರಿಸರ ಪ್ರೇಮ ಮೆರೆದರು. ಮನೆಗೊಂದು ಗಿಡ ನೆಡುವ ಪ್ರತಿಜ್ಞೆ ಕೈಗೊಂಡು ಪರಿಸರ ಉಳಿಸಿ ಬೆಳೆಸುವ ಸಂಕಲ್ಪ ತೊಟ್ಟರು.
ಇದೆ ವೇಳೆ ಶಾಲಾ ಸರ್ಕಾರದ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯ ಶಿಕ್ಷಕ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಬಂಧ ಸ್ಪರ್ಧೆ ವಿಜೇತರಿಗೆ ಗಿಡಗಳನ್ನು ಬಹುಮಾನವಾಗಿ ವಿತರಿಸಲಾಯಿತು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಂಗಾಧರ್, ಸಿಆರ್‌ಪಿ ಉಷಾ, ಎಸ್‌ಡಿಎಂಸಿ ಸದಸ್ಯ ಬಸವರಾಜ್ ಹಾಗೂ ಶಾಲಾ ಶಿಕ್ಷಕರು ಹಾಗೂ ಅರಿವು ಕೇಂದ್ರದ ಮೇಲ್ವಿಚಾರಕಿ ಮಾಲ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಾದ ಸಹನಾ ಸ್ವಾಗತಿಸಿ, ಕೃತಿಕಾ ವಂದಿಸಿ ಡಿಂಪಲ್ ನಿರೂಪಿಸಿದರು.
ಭದ್ರಾವತಿ ನಗರಸಭೆ ವಾರ್ಡ್ ನಂ. ೬ರ ದೇವರಾಜ ಅರಸು ಬಡಾವಣೆಯ ಉದ್ಯಾನವನದಲ್ಲಿ ಪ್ರಯುಕ್ತ ಕಳೆದ ಕೆಲವು ದಿನಗಳ ಹಿಂದೆ ನಿಧನ ಹೊಂದಿದ ದೇಹ ಅಂಗಾಂಗ ದಾನಿ ಕೀರ್ತನವರ ಹೆಸರಿನಲ್ಲಿ ಒಂದು ಶ್ರೀಗಂಧ ಮತ್ತೊಂದು ಅತ್ತಿ ಗಿಡವನ್ನು ನೆಟ್ಟು ಪರಿಸರ ದಿನಾಚರಣೆ ಆಚರಿಸಲಾಯಿತು.
ದೇವರಾಜ ಅರಸು ಬಡಾವಣೆ:
ನಗರಸಭೆ ವಾರ್ಡ್ ನಂ. ೬ರ ದೇವರಾಜ ಅರಸು ಬಡಾವಣೆಯ ಉದ್ಯಾನವನದಲ್ಲಿ ಪ್ರಯುಕ್ತ ಕಳೆದ ಕೆಲವು ದಿನಗಳ ಹಿಂದೆ ನಿಧನ ಹೊಂದಿದ ದೇಹ ಅಂಗಾಂಗ ದಾನಿ ಕೀರ್ತನವರ ಹೆಸರಿನಲ್ಲಿ ಒಂದು ಶ್ರೀಗಂಧ ಮತ್ತೊಂದು ಅತ್ತಿ ಗಿಡವನ್ನು ನೆಟ್ಟು ಪರಿಸರ ದಿನಾಚರಣೆ ಆಚರಿಸಲಾಯಿತು.
ದಿವಂಗತ ಕೀರ್ತನ ರವರು ತಮ್ಮ ಕಾಲದ ನಂತರ ಅಂಗಾಂಗಗಳನ್ನು ದಾನ ಮಾಡಿ ಯುವ ಸಮುದಾಯಕ್ಕೆ ಒಂದು ಸ್ಪೂರ್ತಿ ಮತ್ತು ಮಾದರಿಯಾಗಿದ್ದಾರೆ ಅವರ ಹೆಸರು, ಕಾರ್ಯ ಚಿರಾಯುವಾಗಿರಲಿ ಮತ್ತು ಮುಂದಿನ ಪೀಳಿಗೆಗೆ ಮಾದರಿಯಾಗಿ ಉಳಿಯಬೇಕೆಂಬ ಆಶಯ ವ್ಯಕ್ತಪಡಿಸಲಾಯಿತು. ಬಿಸಿಯೂಟ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶಾರದಮ್ಮ, ಬೆಳಕು ಫೌಂಡೇಶನ್ ಸಂಸ್ಥಾಪಕಿ ಜಯಶೀಲ, ತೀರ್ಥೇಶ್ ಹಾಗೂ ಕಾರ್ತಿಕ್ ಉಪಸ್ಥಿತರಿದ್ದರು.

.jpeg)
.jpeg)