ಭದ್ರಾವತಿ ಸಿ.ಎನ್ ರಸ್ತೆಯಲ್ಲಿ ಸರಣಿ ಕಳ್ಳತನಕ್ಕೆ ಯತ್ನ : ಪೊಲೀಸರಿಂದ ಪರಿಶೀಲನೆ



ಭದ್ರಾವತಿ ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಒಂದಾಗಿರುವ ಚನ್ನಗಿರಿ ರಸ್ತೆ(ಸಿ.ಎನ್ ರಸ್ತೆ)ಯಲ್ಲಿ ಸರಣಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಕಳ್ಳತನಕ್ಕೆ ಯತ್ನಿಸಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು.
ಭದ್ರಾವತಿ: ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಒಂದಾಗಿರುವ ಚನ್ನಗಿರಿ ರಸ್ತೆ(ಸಿ.ಎನ್ ರಸ್ತೆ)ಯಲ್ಲಿ ಸರಣಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
    ಚನ್ನಗಿರಿ ರಸ್ತೆ, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಆಕಾಶ್ ಹಾರ್ಡ್‌ವೇರ್ ಅಂಗಡಿ ಮಾಲೀಕರಾದ ಟಿ.ಪಿ.ಆಕಾಶ್ ಎಂಬುವವರಿಗೆ ಸೇರಿದ ಪೈಂಟ್ ಅಂಗಡಿ ಹಿಂಬದಿ ತಗಡಿನ ಶೀಟ್ ತೆಗೆದು ಒಳಪ್ರವೇಶಿಸಿ ಕಳ್ಳತನಕ್ಕೆ ಯತ್ನಿಸಿರುವುದು ತಿಳಿದು ಬಂದಿದೆ. ಕಳ್ಳತನಕ್ಕೆ ಯತ್ನಿಸಿರುವ ದೃಶ್ಯಗಳು ಅಂಗಡಿಯ ಸಿಸಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ.
ರಂಗಪ್ಪ ವೃತ್ತ ಸಮೀಪದ ಮಧು ಲ್ಯಾಬೋರೇಟರಿ, ಮಾರುತಿ ಮೆಡಿಕಲ್ಸ್, ನೇಹ ಗಾರ್ಮೆಂಟ್ಸ್ ಸೇರಿದಂತೆ ಇನ್ನಿತರ ಮಳಿಗೆಗಳನ್ನು ಒಳಗೊಂಡಿರುವ ಕಾಂಪ್ಲೆಕ್ಸ್ ಗಳಲ್ಲಿನ ಮೊದಲ ಮಹಡಿಯಲ್ಲಿರುವ ಮಾನ್ಯತಾ ಫ್ಯಾಶನ್ಸ್ ಬಟ್ಟೆ ಅಂಗಡಿ ಮಾಲೀಕರಿಗೆ ಸೇರಿದ ಐದು ಮಳಿಗೆಗಳಲ್ಲಿ ಮೂರು ಮಳಿಗೆ ಬೀಗವನ್ನು ಒಡೆದು ಕಳ್ಳತನ ಮಾಡಲು ಯತ್ನಿಸಲಾಗಿದೆ.
    ಇದೆ ಕಾಂಪ್ಲೆಕ್ಸ್ ನಲ್ಲಿರುವ ಜೆ.ರೇಣುಕಪ್ಪ ಎಂಬುವವರಿಗೆ ಸೇರಿದ ರೇರ್ಸ್ ಇನ್ಸೂರೆನ್ಸ್ ಕಚೇರಿಯ ರೋಲಿಂಗ್ ಶೆಟರ್‌ಗೆ ಅಳವಡಿಸಿದ್ದ ಇಂಟರ್ ಲಾಕ್ ಮುರಿದು ಕಳ್ಳತನಕ್ಕೆ ಯತ್ನಿಸಲಾಗಿದೆ. ಜಗನ್ನಾಥ್ ಎಂಬುವವರ ರಾಮಯ್ಯ ಎಂಟರ್‌ಪ್ರೈಸಸ್‌ಗೆ ಸೇರಿದ ಗೃಹಪಯೋಗಿ ಸಾಮಾನುಗಳನ್ನು ಮಾರಾಟ ಮಾಡುವ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಸರಣಿ ಕಳ್ಳತನಕ್ಕೆ ಯತ್ನಿಸಿದ್ದರೂ ಸಹ ಮಳಿಗೆಗಳಲ್ಲಿ ಹಣ ಅಥವಾ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ಈ ಕುರಿತು ಅಂಗಡಿ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಗುರುವಾರ ಮಧ್ಯ ರಾತ್ರಿ ಕಳ್ಳತನಕ್ಕೆ ಯತ್ನಿಸಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳ ಪರಿಶೀಲನೆ ನಡೆಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಭದ್ರಾವತಿ ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಒಂದಾಗಿರುವ ಚನ್ನಗಿರಿ ರಸ್ತೆ(ಸಿ.ಎನ್ ರಸ್ತೆ)ಯಲ್ಲಿ ಸರಣಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಅಂಗಡಿಯ ಬೀಗ ಮುರಿದಿರುವುದು.