ಮಕ್ಕಳು ಚೆಸ್ ಆಟದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲಿ : ಚನ್ನಪ್ಪ
ಭದ್ರಾವತಿ ಲಯನ್ಸ್ ಕ್ಲಬ್ ಶುಗರ್ ಟೌನ್ ಆವರಣದಲ್ಲಿ ಎನ್ ಚೆಸ್ ಸರ್ಕಲ್ ಸಂಯುಕ್ತಾಶ್ರಯದಲ್ಲಿ ದಿವಂಗತ ಸುಲೋಚನಮ್ಮ ಮತ್ತು ಫಿಲೋಮೀನರವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಓಪನ್ ರ್‍ಯಾಪಿಡ್ ಚೆಸ್ ಪಂದ್ಯಾವಳಿಯನ್ನು ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್, ಚನ್ನಪ್ಪ, ಎಚ್.ಡಿ ಕೃಷ್ಣ, ಡಾ. ಸಿ.ಆರ್ ಗುರುರಾಜ ಹಾಗು ಆರ್. ಉಮೇಶ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ: ಚೆಸ್(ಚದುರಂಗ) ನಮ್ಮ ದೇಶದ ಕ್ರೀಡೆ. ಇದು ಒಂದು ಬುದ್ದಿವಂತರ ಆಟ. ಮಕ್ಕಳು ಚೆಸ್ ಆಟದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಲಯನ್ಸ್ ಕ್ಲಬ್ ಶುಗರ್ ಟೌನ್ ಅಧ್ಯಕ್ಷ ಚನ್ನಪ್ಪ ಕರೆ ನೀಡಿದರು.
ಅವರು ಕ್ಲಬ್ ಆವರಣದಲ್ಲಿ ಎನ್ ಚೆಸ್ ಸರ್ಕಲ್ ಸಂಯುಕ್ತಾಶ್ರಯದಲ್ಲಿ ದಿವಂಗತ ಸುಲೋಚನಮ್ಮ ಮತ್ತು ಫಿಲೋಮೀನರವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಓಪನ್ ರ್‍ಯಾಪಿಡ್ ಚೆಸ್ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್, ಕ್ಲಬ್ ಮಾಜಿ ಅಧ್ಯಕ್ಷ ಡಾ ಸಿ.ಆರ್ ಗುರುರಾಜು, ಕಾರ್ಯದರ್ಶಿ ಎಚ್.ಡಿ ಕೃಷ್ಣ, ಸೋಲಾರ್ ನಾಗರಾಜ್, ಆರ್. ಉಮೇಶ್, ಮದಿಯಳಗನ್ ಮತ್ತು ಯುವರಾಜ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಚ್ಛ ನ್ಯಾಯಾಲಯದ ನ್ಯಾಯವಾದಿ ಆರ್. ಲೋಕನಾಥ್ ಕಾರ್ಯಕ್ರಮ ನಿರೂಪಿಸಿ, ಪರಿಣಿತ ಮತ್ತು ಪ್ರೇರಣ ಪ್ರಾರ್ಥಿಸಿದರು.
ಶಿವಮೊಗ್ಗ, ಚಿತ್ರದುರ್ಗ, ತೀರ್ಥಹಳ್ಳಿ, ಸಾಗರ, ಹಾಸನ, ಬಾಗಲಕೋಟೆ, ದಾವಣೆಗೆರೆ, ಹರಿಹರ ಮತ್ತು ಭದ್ರಾವತಿ ಸೇರಿದಂತೆ ವಿವಿಧೆಡೆಗಳಿಂದ ೩೬ ಅಂತರಾಷ್ಟ್ರೀಯ ಶ್ರೇಯಾಂಕದ ಪಟುಗಳು ಸೇರಿದಂತೆ ಸುಮಾರು ೧೫೦ ಚೆಸ್ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಭದ್ರಾವತಿ ಲಯನ್ಸ್ ಕ್ಲಬ್ ಶುಗರ್ ಟೌನ್ ಆವರಣದಲ್ಲಿ ಎನ್ ಚೆಸ್ ಸರ್ಕಲ್ ಸಂಯುಕ್ತಾಶ್ರಯದಲ್ಲಿ ದಿವಂಗತ ಸುಲೋಚನಮ್ಮ ಮತ್ತು ಫಿಲೋಮೀನರವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಓಪನ್ ರ್‍ಯಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಎಂ.ಡಿ ಚಿರಂತ್ ಅತಿಹೆಚ್ಚು ಅಂಕಗಳನ್ನು ಗಳಿಸಿ ಪಂದ್ಯದ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಪ್ರಶಸ್ತಿ ವಿಜೇತರು:
ಒಟ್ಟು ೭ ಸುತ್ತಿನ ಪಂದ್ಯದಲ್ಲಿ ಮುಕ್ತ ವಿಭಾಗದಲ್ಲಿ ಎಂ.ಡಿ ಚಿರಂತ್ ಅತಿಹೆಚ್ಚು ಅಂಕಗಳನ್ನು ಗಳಿಸಿ ಪಂದ್ಯದ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡು ೩ ಸಾವಿರ ರು. ನಗದು ಬಹುಮಾನ ಪಡೆದುಕೊಂಡರು. ಎಸ್.ಎಂ ವೇದಮೂರ್ತಿ ೨ನೇ ಬಹುಮಾನ, ರಕ್ಷಿತ್ ಆರ್. ಉಮೇಶ್ ೩ನೇ ಬಹುಮಾನ, ಧೀರೆಜ್ ಎಂ. ಜಾಧವ್ ೪ನೇ ಬಹುಮಾನ ಹಾಗು ಪ್ರವೇಶ ೫ನೇ ಬಹುಮಾನ ಪಡೆದುಕೊಂಡರು.
ಯು-೧೭ ಓಪನ್ ವಿಭಾಗದಲ್ಲಿ ಕೆ.ಸಿ ಶಮೀತ್ ಶಿಶಿರ್, ವಿಲ್ಲಾಸ್ ಅಂಡ್ರಡೆ, ಅದ್ವೀಕ್ ಉಪಾಧ್ಯಾಯ, ಎಸ್.ಜೆ ದೀಕ್ಷಿತ್ ಮತ್ತು ಎಂ.ಎಚ್ ಆದ್ಯ ಬಹುಮಾನಗಳನ್ನು ಪಡೆದುಕೊಂಡರು. ಯು-೧೧ ವಿಭಾಗದಲ್ಲಿ ಸಾನ್ವಿತಾ ಎ ಶೆಟ್ಟಿ, ನಿಯೋಲಾ ಪಿಂಟೋ, ರಿಶಿಕ್ ಹಾಸನ್ ಓಂಕಾರ್, ಎ.ಎಚ್ ಆರ್ಯ, ಎಂ. ನಿವೇದ್ ಹಾಗು ಎ.ಜಿ ನಿರಜ್ ಪಟೇಲ್ ಹಾಗು ಯು-೭ ಬಾಲಕರ ವಿಭಾಗದಲ್ಲಿ ಸಮರ್ಥ ಎಸ್ ಪೂಜಾರ್, ಎಚ್. ಮನ್ವಿತ್, ಮನೋಹರ, ಸುವ್ಯಕ್ತ ಎಸ್ ಹೊಳ್ಳ, ಹೃತ್ವೀಕ್ ಕೃಷ್ಣ ಉಡುಪ ಹಾಗು ಟಿ.ಎಸ್ ಹನ್ವೀಶ್ ಮತ್ತು ಬಾಲಕಿಯರ ವಿಭಾಗದಲ್ಲಿ ಎನ್.ಜಿ ಜಾನವಿ, ಎಂ.ಆರ್ ವೇದಶ್ರೀ, ಎ. ಯಾಶಿಕಾ, ನ್ಯಾರ ಪಿಂಟೋ ಹಾಗು ಸಾಯಿ ವಿಹಾ ಪಿ ಮೊದಲ ೫ ಸ್ಥಾನಕ್ಕೆ ಭಾಜನರಾದರು.
ಯು-೯ ಬಾಲಕರ ವಿಭಾಗದಲ್ಲಿ ಆರ್. ರಿಷಬ್, ಎಂ.ಸಿ ಕೌಶಿಕ್ ಗೌಡ, ಶ್ರೇಯಾಂಕ ಎ ಗೌಡ, ಅದ್ವೀಕ್ ಜೀವನ್ ನಾಯ್ಕ್ ಮತ್ತು ಸಾತ್ವಿಕ್ ಕೆ ಭೂಟೆ ಮೊದಲ ಐದು ಸ್ಥಾನ ಹಾಗು ಬಾಲಕಿರಯ ವಿಭಾಗದಲ್ಲಿ ಜೆ. ವಿಧಾತ್ರೀ, ಎಚ್.ಎ ಗೃಷಾ ಹೆಗ್ಡೆ, ಆಧಿತ್ರೀ ಜೆ ಶೆಟ್ಟಿ, ಟಿ. ಪ್ರಾರ್ಥನಾ ಮತ್ತು ಜಿ.ಜೆ ಕಾರುನ್ಯಾ ಮೊದಲ ೫ ಬಹುಮಾನಗಳಿಗೆ ಪಡೆದುಕೊಂಡರು.
ಯು-೧೧ ಬಾಲಕರ ವಿಭಾಗದಲ್ಲಿ ಡಿ.ಆರ್ ಚಿರಾಗ್, ಝಾಕಾರ್ ಎಸ್ ಹಿರೇ ಎಸ್. ಹಿರೇಮಠ್, ಎನ್. ಇವಾನ್, ಸಾಯಿಕಾರ್ತಿಕ್ ಮತ್ತು ಮೊನಾಲ್ ಕೆ. ಗೌಡ ಮೊದಲ ಐದು ಸ್ಥಾನ ಮತ್ತು ಬಾಲಕಿಯರ ವಿಭಾಗದಲ್ಲಿ ಎ.ಎನ್ ರಿತುಪರ್ಣ, ಸಾನ್ವಿ ಕೆ ಭೂಟೆ, ಎಂ.ಲೇಖನ, ರಚಿತಾ ಮತ್ತು ಬಿ. ಸಾನ್ವಿ ಮೊದಲ ಐದು ಬಹುಮಾನಗಳಿಗೆ ಭಾಜನರಾದರು.
ಯು-೧೩ ಬಾಲಕರ ವಿಭಾಗದಲ್ಲಿ ಪ್ರಣವ್ ಪ್ರಭಾಕರ್, ದಿವಿತಹ ಕವಚುರ್ ಆರ್. ತನುಷ್, ಎಸ್. ಚಿರಾಗ್ ಹಾಗು ಎಚ್. ರಾಘವೇಂದ್ರ ಭೂಷಣ ಮೊದಲ ಐದು ಬಹುಮನಗಳಿಗೆ ಭಾಜನರಾದರು. ಬಾಲಕಿಯರ ವಿಭಾಗದಲ್ಲಿ ಆರ್. ನವೋಮಿಕ ಪರಿಣಿತ, ಪ್ರೇರಣಾ, ಅನನ್ಯ ಪ್ರಕಾಶ್ ಹಾಗು ಎಲ್. ಗಾನವಿ ಮೊದಲ ಐದು ಬಹುಮನಗಳನ್ನು ತಮ್ಮದಾಗಿಸಿಕೊಂಡರು. ಯು-೧೫ ಬಾಲಕರ ವಿಭಾಗದಲ್ಲಿ ಎಂ.ವಿ ಆಯುಶ್, ಸಾತ್ವಿಕ್, ಸಮರ್ಥ ಬಡಿಗಾರ್, ಆರ್. ಜನಾರ್ಧನ್ ಮತ್ತು ವಿ. ದಿವ್ಯ ಪ್ರಸಾದ್ ಮೊದಲ ಐದು ಬಹುಮಾನಗಳಿಗೆ ಭಾಜನರಾದರು. ಬಾಲಕಿಯರ ವಿಭಾಗದಲ್ಲಿ ಆರ್. ಶಾರದ, ಎ. ಜನ್ಯ ಮತ್ತು ಕೃತಿಕಾ ಬಹುಮಾನಗಳನ್ನು ಪಡೆದುಕೊಂಡರು.

.jpg)