ಕೋಟ್ಯಾಂತರ ಭಕ್ತರ ಕನಸು ನನಸಾಗಿಸಲು ಅಯೋಧ್ಯೆ ಶ್ರೀರಾಮ ಮಂದಿರ ಕಲಾಕೃತಿ ನಿರ್ಮಾಣ

ಉಕ್ಕಿನ ನಗರದ ವಾಸವಿ ಮಹಲ್‌ನಲ್ಲಿ ೧೦೯ನೇ ಪ್ರದರ್ಶನ 


ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ನೂತನ ಶ್ರೀರಾಮ ಮಂದಿರ ನಿರ್ಮಾಣಗೊಂಡು ೨ ವರ್ಷಗಳು ಕಳೆದಿದ್ದು, ಇನ್ನೂ ಕೋಟ್ಯಾಂತರ ಭಕ್ತರಿಗೆ ಆಯೋಧ್ಯೆಗೆ ತೆರಳಿ ಶ್ರೀರಾಮ ಮಂದಿರ ಕಣ್ತುಂಬಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ಭಕ್ತರ ಕನಸು ನನಸಾಗಿಸಬೇಕೆಂಬ ಆಶಯದೊಂದಿಗೆ ತುಮಕೂರು, ಗುಬ್ಬಿ ತಾಲೂಕಿನ ಬಿದರೆ ಗ್ರಾಮದ ನಿವಾಸಿಗಳಾದ ವಿನಯ್ ರಾಮ್ ಗುರೂಜಿ ಅವರು ಆಯೋಧ್ಯೆ ಶ್ರೀರಾಮ ಮಂದಿರದ ಶೈಲಿಯನ್ನು(ಕಲಾಕೃತಿ) ನಿರ್ಮಿಸಿದ್ದು, ಇದೀಗ ಉಕ್ಕಿನ ನಗರ ಭದ್ರಾವತಿಯಲ್ಲಿ ಭಕ್ತರು ಈ ಶ್ರೀರಾಮ ಮಂದಿರವನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ. 
    ಭದ್ರಾವತಿ : ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ನೂತನ ಶ್ರೀರಾಮ ಮಂದಿರ ನಿರ್ಮಾಣಗೊಂಡು ೨ ವರ್ಷಗಳು ಕಳೆದಿದ್ದು, ಇನ್ನೂ ಕೋಟ್ಯಾಂತರ ಭಕ್ತರಿಗೆ ಆಯೋಧ್ಯೆಗೆ ತೆರಳಿ ಶ್ರೀರಾಮ ಮಂದಿರ ಕಣ್ತುಂಬಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ಭಕ್ತರ ಕನಸು ನನಸಾಗಿಸಬೇಕೆಂಬ ಆಶಯದೊಂದಿಗೆ ತುಮಕೂರು, ಗುಬ್ಬಿ ತಾಲೂಕಿನ ಬಿದರೆ ಗ್ರಾಮದ ನಿವಾಸಿಗಳಾದ ವಿನಯ್ ರಾಮ್ ಗುರೂಜಿ ಅವರು ಆಯೋಧ್ಯೆ ಶ್ರೀರಾಮ ಮಂದಿರದ ಶೈಲಿಯನ್ನು(ಕಲಾಕೃತಿ) ನಿರ್ಮಿಸಿದ್ದು, ಇದೀಗ ಉಕ್ಕಿನ ನಗರದ ಭಕ್ತರು ಈ ಶ್ರೀರಾಮ ಮಂದಿರವನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ. 
     ಹಳೇನಗರದ ಬಸವೇಶ್ವರ ವೃತ್ತ, ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ವಾಸವಿ ಮಹಲ್‌ನಲ್ಲಿ ಆರ್ಯ ವೈಶ್ಯ ಮಂಡಳಿ ಹಾಗು ಆರ್ಯವೈಶ್ಯ ಜನಾಂಗದ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಈ ಶ್ರೀರಾಮ ಮಂದಿರ ಭಕ್ತರು ಕಣ್ತುಂಬಿಕೊಳ್ಳಲು ವ್ಯವಸ್ಥೆ ಕೈಗೊಳ್ಳಲಾಗಿದೆ. 
    ಅಯೋಧ್ಯೆಗೆ ತೆರಳಿಗೆ ಶ್ರೀರಾಮ ಮಂದಿರ ಕಣ್ತುಂಬಿಕೊಳ್ಳಲು ಸಾಧ್ಯವಾಗದ ಕೋಟ್ಯಾಂತರ ಭಕ್ತರ ಕನಸನ್ನು ನನಸಾಗಿಸಬೇಕೆಂಬ ಆಶಯದೊಂದಿಗೆ ವಿನಯ್ ರಾಮ್ ಗುರೂಜಿಯವರು ಶ್ರೀರಾಮ ಮಂದಿರದ ಕಲಾಕೃತಿ ನಿರ್ಮಿಸಿ ೧೦೮ ಸ್ಥಳಗಳಲ್ಲಿ ಪ್ರದರ್ಶನ ಮಾಡುವುದಾಗಿ ಭೀಷ್ಮ ಪ್ರತಿಜ್ಞೆ ಮಾಡಿದ್ದರು. ಅದರಂತೆ ಈಗಾಗಲೇ ೧೦೮ ಪ್ರದರ್ಶನ ಯಶಸ್ವಿವಾಗಿ ಕೈಗೊಂಡಿದ್ದಾರೆ. ಭಕ್ತರ ಬೇಡಿಕೆಯಂತೆ ಇದೀಗ ೧೦೯ ಪ್ರದರ್ಶನ ನಡೆಯುತ್ತಿದ್ದು, ಇನ್ನೂ ೮ ದಿನ ಜು.೧೭ರವರೆಗೆ ಪ್ರದರ್ಶನ ನಡೆಯಲಿದೆ. 
    ಜು.೯ರಂದು ಆರ್ಯವೈಶ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಹಿರಿಯ ನ್ಯಾಯವಾದಿ ಕೆ.ಎಂ ದ್ವಾರಕನಾಥ್ ಪ್ರದರ್ಶನಕ್ಕೆ ಚಾಲನೆ ನೀಡಿದರು.  ಆರ್ಯವೈಶ್ಯ ಮಹಾಸಭಾ ಜಿಲ್ಲಾಧ್ಯಕ್ಷ ಭೂಪಾಳಂ ಶಶಿಧರ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ನಾಗೇಶ್, ಜಿಲ್ಲಾ ಉಪಾಧ್ಯಕ್ಷ ಬಿ.ಆರ್ ಬದರಿನಾರಾಯಣ ಶ್ರೇಷ್ಠಿ, ದತ್ತಾತ್ರಿ, ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಸದಸ್ಯರಾದ ಅನುಪಮ ಚನ್ನೇಶ್, ಬಿ.ಎಂ ಮಂಜುನಾಥ್, ಚನ್ನೇಶ್, ಎಸ್.ಎನ್ ಸುಭಾಷ್, ಸುಪ್ರಿಯಾ, ಉಷಾ ಭೂಪಾಳಂ, ಗೀತಾ, ಕಾ.ರಾ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.