ಶೇ.೯೫ರಷ್ಟು ಎಸ್‌ಐಆರ್ ಗಣತಿ ನಮೂನೆ ವಿತರಣೆ



    ಭದ್ರಾವತಿ: ೧೧೨-ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಸ್‌ಐಆರ್-ಮತದಾರರಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ. ಮತಗಟ್ಟೆ ಅಧಿಕಾರಿಗಳು ಪ್ರತಿ ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸುತ್ತಿದ್ದು, ಶನಿವಾರ ಸಂಜೆ ೬ರ ವೇಳೆಗೆ ಒಟ್ಟಾರೆ ಶೇ.೯೫.೮೮ರಷ್ಟು ಗುರಿ ಸಾಧಿಸಲಾಗಿದೆ. 
    ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೨೫೩ ಮತಗಟ್ಟೆಗಳಿದ್ದು, ಎಲ್ಲಾ ಮತಗಟ್ಟೆಗಳಿಗೂ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಟ್ಟು ೨,೧೪,೯೦೭ ಮತದಾರರಿದ್ದು, ಈ ಪೈಕಿ ೨,೦೬,೦೫೭ ಗಣತಿ ನಮೂನೆಗಳ ವಿತರಿಸಲಾಗಿದೆ. ೩೯,೬೦೮ ಗಣತಿ ನಮೂನೆಗಳನ್ನು ಗಣಕೀರಣಗೊಳಿಸಲಾಗಿದ್ದು, ಶೇ.೧೮.೪೩ರಷ್ಟು ಗುರಿಸಾಧಿಸಲಾಗಿದೆ ಎಂದು ತಹಸೀಲ್ದಾರ್ ಪ್ರದೀಪ್ ದೇವಗಿರಿ ಕೋರಿದ್ದಾರೆ.