ತೆರದ ಮನೆ ಕಾರ್ಯಕ್ರಮದಲ್ಲಿ ಲಿಟ್ಲ್ ಫ್ಲವರ್ ಶಾಲಾ ವಿದ್ಯಾರ್ಥಿಗಳು
ಜಿಲ್ಲಾ ಪೊಲೀಸ್ ವತಿಯಿಂದ ಸಾಮಾಜಿಕ ಜವಾಬ್ದಾರಿ ಕಾರ್ಯಯೋಜನೆಯಡಿ ಪೊಲೀಸ್ ಠಾಣೆಗಳನ್ನು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ಕೆಲವು ವರ್ಷಗಳ ಹಿಂದೆ ಅನುಷ್ಠಾನಕ್ಕೆ ತರಲಾಗಿರುವ ತೆರದಮನೆ ಹಾಗು ಪ್ರಸ್ತುತ ಅನುಷ್ಠಾನಕ್ಕೆ ತರಲಾಗಿರುವ ಬೇಡ ಬ್ರೋ ಕಾರ್ಯಕ್ರಮ ಭದ್ರಾವತಿ ನಗರದ ನ್ಯೂಟೌನ್ ಪೊಲೀಸ್ ಠಾಣೆಯಿಂದ ನಡೆಯಿತು.
ಭದ್ರಾವತಿ : ಜಿಲ್ಲಾ ಪೊಲೀಸ್ ವತಿಯಿಂದ ಸಾಮಾಜಿಕ ಜವಾಬ್ದಾರಿ ಕಾರ್ಯಯೋಜನೆಯಡಿ ಪೊಲೀಸ್ ಠಾಣೆಗಳನ್ನು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ಕೆಲವು ವರ್ಷಗಳ ಹಿಂದೆ ಅನುಷ್ಠಾನಕ್ಕೆ ತರಲಾಗಿರುವ ತೆರದಮನೆ ಹಾಗು ಪ್ರಸ್ತುತ ಅನುಷ್ಠಾನಕ್ಕೆ ತರಲಾಗಿರುವ ಬೇಡ ಬ್ರೋ ಕಾರ್ಯಕ್ರಮ ನಗರದ ನ್ಯೂಟೌನ್ ಪೊಲೀಸ್ ಠಾಣೆಯಿಂದ ನಡೆಯಿತು.
ಶಾಲಾ ವಿದ್ಯಾರ್ಥಿಗಳನ್ನು ಠಾಣೆಗಳಿಗೆ ಕರೆತಂದು ಪೊಲೀಸ್ ಇಲಾಖೆಯ ಕಾರ್ಯ ವಿಧಾನಗಳನ್ನು ಪರಿಚಯಿಸುವ ಮೂಲಕ ಜನಸ್ನೇಹಿಯಾಗಿಸುವುದು ತೆರದಮನೆ ಕಾರ್ಯಕ್ರಮದ ಉದ್ದೇಶವಾಗಿದೆ. ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಬೇಡ ಬ್ರೋ ಕಾರ್ಯಕ್ರಮ ಕುರಿತು ನ್ಯೂಟೌನ್ ಲಿಟ್ಲ್ ಫ್ಲವರ್ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು. ಠಾಣಾ ಉಪ ನಿರೀಕ್ಷಕರಾದ ರಮೇಶ್, ಕವಿತಾ ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು.
