೩ನೇ ಸೌತ್ ಲೆವೆಲ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ

ಕಿಂಗ್ ಕಿಕ್ ಮಾರ್ಷಿಯಲ್ ಆರ್ಟ್ಸ್ ಆಕಾಡೆಮಿ ಕ್ರೀಡಾಪಟುಗಳಿಗೆ ಬಹುಮಾನ 


ಬೆಂಗಳೂರು ಬನ್ನೇರುಘಟ್ಟದಲ್ಲಿ ಜರುಗಿದ ೩ನೇ ಸೌತ್ ಲೆವೆಲ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ತಾಲೂಕಿನ ಕಿಂಗ್ ಕಿಕ್ ಮಾರ್ಷಿಯಲ್ ಆರ್ಟ್ಸ್ ಆಕಾಡೆಮಿಯ ಕರಾಟೆ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ:  ಬೆಂಗಳೂರು ಬನ್ನೇರುಘಟ್ಟದಲ್ಲಿ ಜರುಗಿದ ೩ನೇ ಸೌತ್ ಲೆವೆಲ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ತಾಲೂಕಿನ ಕರಾಟೆ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 
    ಕಿಂಗ್ ಕಿಕ್ ಮಾರ್ಷಿಯಲ್ ಆರ್ಟ್ಸ್ ಆಕಾಡೆಮಿಯ ಸುಮಾರು ೪೮ ಕ್ರೀಡಾಪಟುಗಳು ಜು. ೧೨ರಂದು ಜರುಗಿದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಈ ಪೈಕಿ ೩೬ ಕ್ರೀಡಾಪಟುಗಳು ಪ್ರಥಮ ಹಾಗು ಉಳಿದಂತೆ ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪಡೆದುಕೊಂಡು ಕೀರ್ತಿ ತಂದಿದ್ದಾರೆ. 
    ಪರಿಶ್ರಮ, ಶಿಸ್ತು ಹಾಗೂ ತರಬೇತುದಾರರ ಮಾರ್ಗದರ್ಶನವೇ ಈ ಯಶಸ್ಸಿನ ಹಿಂದಿನ ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಆಕಾಡೆಮಿ ಶುಭ ಹಾರೈಸಿದೆ.