ಎಸ್‌ಐಆರ್ ಶೇ.೧೦೦ರಷ್ಟು ಗುರಿ ಸಾಧಿಸಿದ ಮತಗಟ್ಟೆ ಅಧಿಕಾರಿ ಆರ್. ವಿಜಯಲಕ್ಷ್ಮೀ

ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಿದ ತಾಲೂಕು ಆಡಳಿತ 


ಮತದಾರರಪಟ್ಟಿ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕಾರ್ಯದಲ್ಲಿ ೧೧೨-ಭದ್ರಾವತಿ ವಿಧಾನಸಭಾ ಕ್ಷೇತ್ರದ ಭಾಗಸಂಖ್ಯೆ ೨೩೨ರ ಮತಗಟ್ಟೆ ಅಧಿಕಾರಿಯಾಗಿರುವ ಅಂಗನವಾಡಿ ಕಾರ್ಯಕರ್ತೆ ಆರ್. ವಿಜಯಲಕ್ಷ್ಮಿ ಶೇ.೧೦೦ರಷ್ಟು ಗುರಿಸಾಧಿಸಿದ್ದು, ಈ ಹಿನ್ನಲೆಯಲ್ಲಿ ತಾಲೂಕು ಆಡಳಿತದಿಂದ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ : ಮತದಾರರಪಟ್ಟಿ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕಾರ್ಯದಲ್ಲಿ ೧೧೨-ಭದ್ರಾವತಿ ವಿಧಾನಸಭಾ ಕ್ಷೇತ್ರದ ಭಾಗಸಂಖ್ಯೆ ೨೩೨ರ ಮತಗಟ್ಟೆ ಅಧಿಕಾರಿಯಾಗಿರುವ ಅಂಗನವಾಡಿ ಕಾರ್ಯಕರ್ತೆ ಆರ್. ವಿಜಯಲಕ್ಷ್ಮಿ ಶೇ.೧೦೦ರಷ್ಟು ಗುರಿಸಾಧಿಸಿದ್ದು, ಈ ಹಿನ್ನಲೆಯಲ್ಲಿ ತಾಲೂಕು ಆಡಳಿತದಿಂದ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. 
    ಗಣತಿ ನಮೂನೆ ವಿತರಣೆ ಹಾಗು ನಮೂನೆಗಳ ಗಣಕೀಕರಣ ಕಾರ್ಯದಲ್ಲಿ ಶೇ.೧೦೦ರಷ್ಟು ಗುರಿ ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ. ತಹಸೀಲ್ದಾರ್ ಪ್ರದೀಪ್ ದೇವಗಿರಿ, ಚುನಾವಣಾ ಶಿರಸ್ತೇದಾರ್ ಗಿರಿರಾಜ್, ಕಂದಾಯ ನಿರೀಕ್ಷಕ ಪ್ರಶಾಂತ್, ಹನುಮಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಶೇ.೧೦೦ರಷ್ಟು ಗಣತಿ ನಮೂನೆ ವಿತರಣೆ : 
    ೧೧೨-ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರಪಟ್ಟಿ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಗಣತಿ ನಮೂನೆ ವಿತರಣೆ ಕಾರ್ಯದಲ್ಲಿ ಗುರುವಾರ ಸಂಜೆ ವೇಳೆಗೆ ಶೇ.೧೦೦ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು ೧,೧೪,೯೦೪ ಮತದಾರರಿಗೆ ಗಣತಿ ನಮೂನೆ ವಿತರಿಸಲಾಗಿದೆ. ಶುಕ್ರವಾರ ಸಂಜೆ ವೇಳೆಗೆ ೧,೧೧,೮೯೧ ನಮೂನೆಗಳು ಗಣಕೀಕರಣಗೊಳಿಸಲಾಗಿದ್ದು, ಶೇ.೫೨.೦೬ರಷ್ಟು ಗುರಿ ಸಾಧಿಸಲಾಗಿದೆ.