ಪೇಪರ್ ಟೌನ್, ಸಂಚಾರಿ ಪೊಲೀಸ್ ಠಾಣೆಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ. ನಿಖಿಲ್ ಭೇಟಿ

ವಾರ್ಷಿಕ ಪರಿವೀಕ್ಷಣೆ ನಡೆಸಿ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಲಹೆ, ಸೂಚನೆ 


ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ. ನಿಖಿಲ್ ಶುಕ್ರವಾರ ಭದ್ರಾವತಿ ನಗರದ  ಪೇಪರ್ ಟೌನ್ ಹಾಗು ಸಂಚಾರಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ವಾರ್ಷಿಕ ಪರಿವೀಕ್ಷಣೆ ನಡೆಸಿದರು. 
    ಭದ್ರಾವತಿ : ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ. ನಿಖಿಲ್ ಶುಕ್ರವಾರ ನಗರದ  ಪೇಪರ್ ಟೌನ್ ಹಾಗು ಸಂಚಾರಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ವಾರ್ಷಿಕ ಪರಿವೀಕ್ಷಣೆ ನಡೆಸಿದರು. 
    ಎರಡು ಠಾಣೆಗಳಲ್ಲಿ ಅಧಿಕಾರಿಗಳು ಹಾಗು ಸಿಬ್ಬಂದಿಗಳಿಂದ ಗೌರವ ವಂದನೆಗಳನ್ನು ಸ್ವೀಕರಿಸಿದರು. ನಂತರ  ನಂತರ ಠಾಣಾ ಕಾರ್ಯವೈಖರಿ, ದಾಖಲಾತಿ ಹಾಗೂ ಕಡತ ನಿರ್ವಹಣೆ ಮತ್ತು ಇತರೆ ಪ್ರಮುಖ ವಿಷಯಗಳನ್ನು ಪರಿಶೀಲಿಸಿದರು. ಅಲ್ಲದೆ ಅಧಿಕಾರಿಗಳು ಹಾಗು ಸಿಬ್ಬಂದಿಗಳ ಕುಂದು-ಕೊರತೆಗಳನ್ನು ಆಲಿಸಿ ಉತ್ತಮ ಕರ್ತವ್ಯ ನಿರ್ವಹಿಸುವ ಸಂಬಂಧ ಸಲಹೆ ಸೂಚನೆಗಳನ್ನು  ನೀಡಿದರು. 
    ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಚಿದಾನಂದ ಹಾಗು ಎರಡು ಠಾಣೆಗಳ ಉಪ ನಿರೀಕ್ಷಕರು ಮತ್ತು ಸಹಾಯಕ ಉಪ ನಿರೀಕ್ಷಕರು ಉಪಸ್ಥಿತರಿದ್ದರು.