ಶ್ರೀ ದತ್ತಾಶ್ರಮದಲ್ಲಿ ಆದ್ದೂರಿಯಾಗಿ ಜರುಗಿದ ಗುರು ಪೂರ್ಣಿಮಾ ಮಹೋತ್ಸವ
ಶ್ರೀ ಕಾಂತಾನಂದ ಸರಸ್ವತೀ ಭಗವಾನ್ ಮಹಾರಾಜ್ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಭದ್ರಾವತಿ ನಗರದ ನ್ಯೂಟೌನ್ ಶ್ರೀ ದತ್ತಾಶ್ರಮದಲ್ಲಿ ಬುಧವಾರ ಗುರು ಪೂರ್ಣಿಮಾ ಮಹೋತ್ಸವ ಆಚರಿಸಲಾಯಿತು.
ಭದ್ರಾವತಿ : ಶ್ರೀ ಕಾಂತಾನಂದ ಸರಸ್ವತೀ ಭಗವಾನ್ ಮಹಾರಾಜ್ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಗರದ ನ್ಯೂಟೌನ್ ಶ್ರೀ ದತ್ತಾಶ್ರಮದಲ್ಲಿ ಬುಧವಾರ ಗುರು ಪೂರ್ಣಿಮಾ ಮಹೋತ್ಸವ ಆಚರಿಸಲಾಯಿತು.
ನಗರಕ್ಕೆ ಆಗಮಿಸಿದ ಶ್ರೀಗಳನ್ನು ಬೆಳಿಗ್ಗೆ ಪೂರ್ಣ ಕುಂಭದ ಮೂಲಕ ಭಕ್ತರು ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ಶ್ರೀಗಳಿಂದ ವ್ಯಾಸ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ, ಗುರುಭಿಕ್ಷೆ ಹಾಗು ಮಧ್ಯಾಹ್ನ ಮಹಾಪ್ರಸಾದ ನೆರವೇರಿತು. ಶ್ರೀಗಳ ಚಾತುರ್ಮಾಸದ ಅಂಗವಾಗಿ ಸೆ.೨೯ರವರೆಗೆ ಪ್ರತಿದಿನ ಬೆಳಿಗ್ಗೆ ೧೦ ಗಂಟೆಯಿಂದ ಲಲಿತ ಸಹಸ್ರನಾಮ, ಭಜನೆ ಮತ್ತು ಶ್ರೀಗಳವರ ಪಾದಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ.
ವಿಶೇಷ ಎಂದರೆ ೨೯ ಜುಲೈ ೨೦೦೭ರಂದು ಹಿರಿಯ ಶ್ರೀಗಳಾದ ಶ್ರೀ ವಿರಜಾನಂದ ಸರಸ್ವತೀ ಮಹಾರಾಜ್ ಸ್ವಾಮೀಜಿಯರು ನಗರಕ್ಕೆ ಆಗಮಿಸಿದ್ದರು. ಶ್ರೀಗಳ ದಿವ್ಯಸಾನಿಧ್ಯದಲ್ಲಿ ಗುರು ಪೂರ್ಣಿಮಾ ಮಹೋತ್ಸವ ಜರುಗಿತ್ತು. ಇವರ ಶಿಷ್ಯರಾದ ಶ್ರೀ ಕಾಂತಾನಂದ ಸರಸ್ವತೀ ಭಗವಾನ್ ಮಹಾರಾಜ್ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಈ ಬಾರಿ ಗುರು ಪೂರ್ಣಿಮಾ ಮಹೋತ್ಸವ ಅದ್ದೂರಿಯಾಗಿ ನೆರವೇರಿರುವುದು ಭಕ್ತ ವೃಂದದಲ್ಲಿ ಸಂತಸವನ್ನುಂಟು ಮಾಡಿದೆ. ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಗುರು ಪೂರ್ಣಿಮಾ ಮಹೋತ್ಸವ ಕಣ್ತುಂಬಿಕೊಂಡು, ಗುರುಗಳ ಆಶೀರ್ವಾದ ಪಡೆದುಕೊಂಡರು.

.jpeg)