ನೂತನ ಪೊಲೀಸ್ ಕವಾಯತು ಮೈದಾನ ಉದ್ಘಾಟಿಸಿದ ಪೂರ್ವವಲಯ ಪೊಲೀಸ್ ಮಹಾನಿರ್ದೇಶಕ
ಭದ್ರಾವತಿ ನಗರದ ಹುಡ್ಕೋ ಕಾಲೋನಿ, ಮಿಲ್ಟ್ರಿ ಕ್ಯಾಂಪ್ ಪೊಲೀಸ್ ವಸತಿ ಸಮುಚ್ಚಯದಲ್ಲಿ ನಿರ್ಮಿಸಲಾಗಿರುವ ನೂತನ ಕವಾಯತು ಮೈದಾನ ಉದ್ಘಾಟಿಸಿದ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ ಡಾ. ಬಿ.ಆರ್ ರವಿಕಾಂತೆಗೌಡ ಅವರನ್ನು ಬುಧವಾರ ಪೊಲೀಸ್ ಉಪವಿಭಾಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ: ನಗರದ ಹುಡ್ಕೋ ಕಾಲೋನಿ, ಮಿಲ್ಟ್ರಿ ಕ್ಯಾಂಪ್ ಪೊಲೀಸ್ ವಸತಿ ಸಮುಚ್ಚಯದಲ್ಲಿ ನಿರ್ಮಿಸಲಾಗಿರುವ ನೂತನ ಕವಾಯತು ಮೈದಾನ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕ ಡಾ. ಬಿ.ಆರ್ ರವಿಕಾಂತೆಗೌಡ ಬುಧವಾರ ಉದ್ಘಾಟಿಸಿದರು.
ಈ ಹಿಂದೆ ಡಿಎಆರ್ ಮೈದಾನದಲ್ಲಿ ಕವಾಯತು ಮೈದಾನ ನಿರ್ಮಿಸಲಾಗಿತ್ತು. ಪ್ರಸ್ತುತ ಈ ಕವಾಯತು ಮೈದಾನ ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ಅಧೀನಕ್ಕೆ ಸೇರ್ಪಡೆಗೊಂಡಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಕವಾಯತು ನಡೆಸಲು ಸೂಕ್ತ ಮೈದಾನವಿರಲಿಲ್ಲ. ಪೊಲೀಸ್ ಸಿಬ್ಬಂದಿಗಳು ವಿಐಎಸ್‌ಎಲ್, ಎಂಪಿಎಂ ಕೀಡಾಂಗಣಗಳಲ್ಲಿ ಕವಾಯತು ನಡೆಸುತ್ತಿದ್ದಾರೆ. ಇಲಾಖೆಗೆ ಪ್ರತ್ಯೇಕ ಕವಾಯತು ಮೈದಾನದ ಅವಶ್ಯಕತೆ ಇತ್ತು ಈ ಹಿನ್ನಲೆಯಲ್ಲಿ ಸೂಕ್ತ ಸ್ಥಳ ಗುರುತಿಸಿ ನೂತನ ಕವಾಯತು ಮೈದಾನ ನಿರ್ಮಿಸಲಾಗಿದೆ.
ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ, ಪೊಲೀಸ್ ಉಪಾಧೀಕ್ಷಕ ಪ್ರಕಾಶ ರಾಠೋಡ್ ಹಾಗು ಉಪ-ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು, ಕುಟುಂಬ ವರ್ಗ ಉಪಸ್ಥಿತರಿದ್ದರು.
