ಜು.೫ರಂದು ಪಿಂಚಣಿ ಕುಂದುಕೊರತೆಗಳ ಸಮಾವೇಶ
ಭದ್ರಾವತಿ: ಪಿಂಚಣಿಯಿಂದ ವಂಚಿತರಾಗಿರುವ ಹಾಗು ಸ್ಥಗಿತಗೊಂಡಿರುವವರಿಗೆ ಮರುಪಿಂಚಣಿ ಜಾರಿಗೊಳಿಸಲು ಹಾಗು ತಹಸೀಲ್ದಾರ್‌ರವರ ಕಛೇರಿಯಿಂದ ಶಾಶ್ವತ ಆದೇಶ ಪ್ರತಿ ನೀಡಲು ಜು.೫ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ ಅವರ ನೇತೃತ್ವದಲ್ಲಿ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಪಿಂಚಣಿ ಕುಂದುಕೊರತೆಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸಾಮಾಜಿಕ ಯೋಜನೆಯಡಿಯಲ್ಲಿ ಬರುವ ಪಿಂಚಣಿಗಳಾದ ಅಂಗವಿಕಲ ವೇತನ, ವಿಧವಾ ವೇತನ, ಸಂಧ್ಯಾಸುರಕ್ಷತಾ ವೇತನ, ವೃದ್ಧಾಪ್ಯ ವೇತನ, ಮನಸ್ವಿನಿ ವೇತನ, ಮೈತ್ರಿ ವೇತನಗಳಿಂದ ವಂಚಿತರಾದ ಹಾಗು ಸ್ಥಗಿತಗೊಂಡಿರುವವರಿಗೆ ಮರುಪಿಂಚಣಿ ಜಾರಿಗೊಳಿಸಲು ಹಾಗು ತಹಸೀಲ್ದಾರ್‌ರವರ ಕಛೇರಿಯಿಂದ ಶಾಶ್ವತ ಆದೇಶ ಪ್ರತಿ ನೀಡಲು ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳು ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ೩ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ಪಿಂಚಣಿಯ ಆದೇಶದ ಪ್ರತಿ ಹಾಗು ಆದಾಯ ದೃಢೀಕರಣ ಪತ್ರ ನಕಲು ಪ್ರತಿಗಳನ್ನು ತರುವುದು. ಫಲಾನುಭವಿಗಳು ಇದರ ಸದುಪಯೋಗಪಡೆದುಕೊಳ್ಳುವಂತೆ ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್ ಕೋರಿದ್ದಾರೆ.
