ಜು.೧೧ರಂದು ಪದವಿ, ಪ್ರಮಾಣಪತ್ರ ವಿತರಣೆ ಸಮಾರಂಭ



    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಸಮೀಪದ ಈಬೈಟ್ ಎಜ್ಯುಕೇಷನ್ ಸೆಂಟರ್(ನರ್ಸರಿ ಟೀಚರ್‍ಸ್ ಟೈನಿಂಗ್ ಪ್ರೋಗಾಂ) ವತಿಯಿಂದ ಜು.೧೧ರ ಶನಿವಾರ ಸಂಜೆ ೪ ಗಂಟೆಗೆ ಪದವಿ ಮತ್ತು ಪ್ರಮಾಣಪತ್ರ ವಿತರಣೆ ಸಮರಂಭ ಆಯೋಜಿಸಲಾಗಿದೆ. 
    ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಅಭಿಷೇಕ್, ಮೌಂಟ್ ವಿಷನ್ ಸ್ಕೂಲ್ ಸಂಸ್ಥಾಪಕಿ ಹಾಗು ಪ್ರಾಂಶುಪಾಲರಾದ ನಜಿಯಾ ಬಾನು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ೨೦೨೫-೨೬ನೇ ಸಾಲಿನ ಪಿಎಸ್‌ಟಿಟಿಐ ಪದವಿ ಮತ್ತು ಪ್ರಮಾಣಪತ್ರ ವಿತರಣೆ ಹಾಗು ೨೦೨೬-೨೭ನೇ ಸಾಲಿನ ಶೈಕ್ಷಣಿಕ ತಂಡಕ್ಕೆ ಸ್ವಾಗತ ನಡೆಯಲಿದೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.