ಅಮೂಲ್ಯ ಜೀವಗಳನ್ನು ಉಳಿಸಲು ರಕ್ತದಾನ ಮಾಡಿ : ಅನೂಪ್ ಕುಮಾರ್


ಭದ್ರಾವತಿ ನ್ಯೂಟೌನ್ ಸೈಲ್-ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಜೀವ ಸಂಜೀವಿನಿ ಸ್ವಯಂ ಸೇವಾ ರಕ್ತ ಕೇಂದ್ರದ ಸಹಯೋಗದೊಂದಿಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 
    ಭದ್ರಾವತಿ: ಅಮೂಲ್ಯ ಜೀವಗಳನ್ನು ಉಳಿಸಲು ನೌಕರರು ಮತ್ತು ಸಾರ್ವಜನಿಕರು ನಿಯಮಿತವಾಗಿ ರಕ್ತದಾನ ಮಾಡುವಂತೆ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಅನೂಪ್ ಕುಮಾರ್ ಮನವಿ ಮಾಡಿದರು.
    ಅವರು ಮಂಗಳವಾರ ನಗರದ ನ್ಯೂಟೌನ್ ಸೈಲ್-ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಜೀವ ಸಂಜೀವಿನಿ ಸ್ವಯಂ ಸೇವಾ ರಕ್ತ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.  ಅಮೂಲ್ಯ ಜೀವ ಉಳಿಸಲು ರಕ್ತದ ಅಗತ್ಯತೆ ಹೆಚ್ಚಿನದ್ದಾಗಿದೆ. ರಕ್ತದ ಮಹತ್ವ ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆಂದರು. 
    ಮುಖ್ಯ ಮಹಾಪ್ರಬಂಧಕ(ಮಾನವ ಸಂಪನ್ಮೂಲ) ಬಿ. ವಿಶ್ವನಾಥ್,  ಮಹಾಪ್ರಬಂಧಕ ಪ್ರಭಾರಿ(ಸ್ಥಾವರ) ಟಿ. ರವಿಚಂದ್ರನ್,  ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಎಸ್ ಸುಜೀತ್ ಕುಮಾರ್, ಕಾರ್ಮಿಕರ ಸಂಘದ ಅಧ್ಯಕ್ಷ  ಅಮೃತ್ ಕುಮಾರ್ ಮತ್ತು ಜೀವ ಸಂಜೀವಿನಿ ಸ್ವಯಂಸೇವಾ ರಕ್ತ ಕೇಂದ್ರದ ಆಡಳಿತಾಧಿಕಾರಿ ರಾಜು ನರಸಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಉಪ ಮುಖ್ಯ ವೈದ್ಯಾಧಿಕಾರಿ ಡಾ. ಎಚ್. ಶೋಭ ಸ್ವಾಗತಿಸಿ ವಂದಿಸಿದರು.
    ಶಿಬಿರದಲ್ಲಿ ವಿಐಎಸ್‌ಎಲ್ ಉದ್ಯೋಗಿಗಳು, ಗುತ್ತಿಗೆ ಕಾರ್ಮಿಕರು, ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿಗಳು ಮತ್ತು ಸ್ವಯಂಸೇವಕರು ಸ್ವಯಂಪ್ರೇರಿತ ರಕ್ತದಾನದ ಮೂಲಕ ಜೀವಗಳನ್ನು ಉಳಿಸುವ  ಉದ್ದೇಶಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು.