ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಅಂತರರಾಷ್ಟ್ರೀಯ ಹಿರಿಯರ ದಿನಾಚರಣೆ


ಭದ್ರಾವತಿ ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ ಅಂತರರಾಷ್ಟ್ರೀಯ ಹಿರಿಯರ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು. 
    ಭದ್ರಾವತಿ : ಹಳೇನಗರ ವ್ಯಾಪ್ತಿಯ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದಲ್ಲಿ ಭಾನುವಾರ ಅಂತರರಾಷ್ಟ್ರೀಯ ಹಿರಿಯರ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು. 
    ``ನಾನು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ'' ಎಂಬ ಧ್ಯೇಯ ವಾಕ್ಯದಡಿ ಹಿರಿಯರ ದಿನವನ್ನು ಪ್ರಾರ್ಥನಾಪೂರ್ವಕ ಗೌರವದೊಂದಿಗೆ ಆಚರಿಸಿದರು. ಧರ್ಮ ಕೇಂದ್ರದ ಗುರುಗಳಾದ ಫಾದರ್ ಸ್ಟೀವನ್ ಡೇಸಾ ರವರಿಂದ ಪೂಜಾ ವಿಧಿ-ವಿಧಾನಗಳು ನೆರವೇರಿದವು. ಚಿಕ್ಕ ಮಕ್ಕಳಿಂದ ಪ್ರಾರ್ಥನಾ ಭಾಗಗಳಿಗೆ ಸಹಕರಿಸಲಾಯಿತು. ಮಕ್ಕಳಿಂದ ನೆರೆದಂತ ಹಿರಿಯರಿಗೆ ಗೌರವಾಯುತ ಉಡುಗೊರೆಗಳನ್ನು ನೀಡಲಾಯಿತು. 
    ಧರ್ಮೋಪದೇಶದ ನಿರ್ದೇಶಕಿ ಸಿಸ್ಟರ್ ತೆರೇಸಾ ಮಸ್ಕರೇನಸ್‌ರವರ ಮಾರ್ಗದರ್ಶನದಲ್ಲಿ ಮಕ್ಕಳು ಪ್ರಾರ್ಥನೆ ಮತ್ತು ಗಾಯಕವೃಂದದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. 
    ಹಿರಿಯರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ, ಸುಃಖ, ಶಾಂತಿ, ನೆಮ್ಮದಿ ಹಾಗು ದೈವಿಕ ರಕ್ಷಣೆ ದೊರೆಯುವಂತೆ ಪ್ರಾರ್ಥನೆಯೊಂದಿಗೆ ಕೋರಲಾಯಿತು. 
    ಮಕ್ಕಳು ಕಾಮನಬಿಲ್ಲಿನ ಏಳು ಬಣ್ಣಗಳ ಧ್ವಜಗಳನ್ನು ಹಿಡಿದು ಪ್ರತಿಯೊಂದು ಬಣ್ಣವೂ ಹಿರಿಯರ ನಿರ್ದಿಷ್ಟ ಕೊಡುಗೆ, ಸದ್ಗುಣ, ಆಕಾಂಕ್ಷೆ ಅಥವಾ ಸೇವೆಯನ್ನು ಪ್ರತಿನಿಧಿಸುವ ಅರ್ಥ ತಿಳಿಸಿಕೊಟ್ಟರು. 
    ನಿರ್ಮಲ ಆಸ್ಪತ್ರೆಯ ಸುಪೀರಿಯರ್ ಸಿಸ್ಟರ್ ವಿಲ್ಮಾ, ಸಿಸ್ಟರ್ ಶೋಭನ, ಸಿಸ್ಟರ್ ಸರಿತಾ, ಧರ್ಮಭಗೀನಿಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.