ನರ್ಸರಿ ಟೀಚರ್‍ಸ್ ಟ್ರೈನಿಂಗ್ ಪ್ರೋಗಾಂ ತರಬೇತಿ : ಪದವಿ, ಪ್ರಮಾಣ ಪತ್ರ ವಿತರಣೆ

ಮಕ್ಕಳ ಶಿಕ್ಷಣ ಕಲಿಕೆಯಲ್ಲಿ ಪ್ರಮುಖ ಪಾತ್ರವಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಅಭಿಷೇಕ್ 


ಭದ್ರಾವತಿ ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಸಮೀಪದ ಈಬೈಟ್ ಎಜ್ಯುಕೇಷನ್ ಸೆಂಟರ್‌ನಲ್ಲಿ ನರ್ಸರಿ ಟೀಚರ್‍ಸ್ ಟ್ರೈನಿಂಗ್ ಪ್ರೋಗಾಂ(ಪಿಎಸ್‌ಟಿಟಿಐ) ತರಬೇತಿ ಪಡೆದು ಉತ್ತೀರ್ಣರಾದವರಿಗೆ ಪದವಿ ಹಾಗು ಪ್ರಮಾಣ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಅಭಿಷೇಕ್ ವಿತರಿಸಿದರು. 
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಸಮೀಪದ ಈಬೈಟ್ ಎಜ್ಯುಕೇಷನ್ ಸೆಂಟರ್‌ನಲ್ಲಿ ನರ್ಸರಿ ಟೀಚರ್‍ಸ್ ಟ್ರೈನಿಂಗ್ ಪ್ರೋಗಾಂ(ಪಿಎಸ್‌ಟಿಟಿಐ) ತರಬೇತಿ ಪಡೆದು ಉತ್ತೀರ್ಣರಾದವರಿಗೆ ಪದವಿ ಹಾಗು ಪ್ರಮಾಣ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಅಭಿಷೇಕ್ ವಿತರಿಸಿ ಮಕ್ಕಳ ಶಿಕ್ಷಣ ಕಲಿಕೆಯಲ್ಲಿ ಪ್ರಮುಖ ಪಾತ್ರವಹಿಸುವಂತೆ ಕರೆ ನೀಡಿದರು. 
    ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೌಂಟ್ ವಿಷನ್ ಸ್ಕೂಲ್ ಸಂಸ್ಥಾಪಕಿ ಹಾಗು ಪ್ರಾಂಶುಪಾಲರಾದ ನಜಿಯಾ ಬಾನು ಪದವಿ ಪಡೆದವರನ್ನು ಅಭಿನಂದಿಸಿ ಪ್ರೋತ್ಸಾಹದ ನುಡಿಗಳನ್ನಾಡಿದರು. ಪದವಿ ಪಡೆದ ಶೃತಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವಾಲ್‌ಪ್ರೋ ಸ್ಪೋರ್ಟ್ಸ್‌ವೇರ್ ಮಾಲೀಕ ಜೇಮ್ಸ್ ವ್ಯಾಲೆಂಟೈನ್ ೨೦೨೬-೨೭ನೇ ಸಾಲಿನ ಶೈಕ್ಷಣಿಕ ತಂಡಕ್ಕೆ ಸ್ವಾಗತ ಕೋರಿದರು. ಈಬೈಟ್ ಎಜ್ಯುಕೇಷನ್ ಸೆಂಟರ್ ಸಂಸ್ಥಾಪಕಿ ಮತ್ತು ಆಡಳಿತಾಧಿಕಾರಿ ಅಗ್ನೆಸ್ ವ್ಯಾಲೆಂಟೈನ್ ಉಪಸ್ಥಿತರಿದ್ದರು. 
    ವಿಭಾಗದ ಮುಖ್ಯಸ್ಥೆ ಚಂದ್ರಕಲಾ ಮತ್ತು ಸ್ವಪ್ನ ಸ್ವಾಗತಿಸಿದರು. ಭಾನುಪ್ರಿಯ, ಎಂ.ಸಿ ಸಹನಾ ಮತ್ತು ಮೋನಿಷಾ ಪದವಿ ಪ್ರಮಾಣಪತ್ರಗಳ ಹೆಸರನ್ನು ವಾಚಿಸಿದರು. ವಾಲ್‌ಪ್ರೋ ಸ್ಪೋರ್ಟ್ಸ್‌ವೇರ್ ಜಸ್ಟಿನ್ ಅಚಲ್ ಅತಿಥಿಗಳನ್ನು ಪರಿಚಯಿಸಿ, ಸಿಂಧೂ ವಂದಿಸಿದರು.