ಆ.15, 16 ಎರಡು ದಿನ ವಿದ್ಯುತ್ ವ್ಯತ್ಯಯ


    ಭದ್ರಾವತಿ : ಕ್ಷೇತ್ರದ ಮೆಸ್ಕಾಂ ಘಟಕ-4ರ ಶಾಖಾ ವ್ಯಾಪ್ತಿಯಲ್ಲಿ ಆನೆಕೊಪ್ಪ ಭದ್ರಾ ರಿವರ್ ಕ್ರಾಸ್ ಬಳಿ ಸಿಎಚ್-193+470, 110ಕೆ.ವಿ ಎಂಪಿಎಂ (ಶಿವಮೊಗ್ಗ-ಎಂ.ಪಿ.ಎಂ ಕಾರ್ಖಾನೆ) ಮಾರ್ಗದಲ್ಲಿ ಎನ್ಎಚ್ -206 ಇ.ಎಚ್.ಟಿ  ಲೈನ್ ಶಿಪ್ಪಿಂಗ್ ಕೆಲಸಗಳನ್ನು ಆ. 15 ಮತ್ತು 16 ರಂದು ಹಮ್ಮಿಕೊಂಡಿದ್ದು, ಎಫ್-18 ಭದ್ರಾ ಪ್ಯಾಕೇಡ್ಸ್. ಎಫ್-5 ಅಂತರಗಂಗೆ, ಎಫ್-11 ಕಾರೇಹಳ್ಳಿ, ಎಫ್-16 ದೊಡ್ಡರಿ ಮತ್ತು ಎಫ್-17 ಕಾಳಿಂಗನಹಳ್ಳಿ ಫೀಡರ್ ಗಳ  ಮಾರ್ಗಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಬಾರಂದೂರು, ಹಳ್ಳಿಕೆರೆ. ಕಾರೇಹಳ್ಳಿ, ಮಾವಿನಕೆರೆ, ಕೆಂಚೇನಹಳ್ಳಿ, ದೊಡ್ಡೇರಿ, ಗಂಗೂರು, ದೇವರನರಸೀಪುರ, ಮಸರಹಳ್ಳಿ. ಅಂತರಗಂಗೆ, ಕಾಚಗೊಂಡನಹಳ್ಳಿ, ಬೊಮ್ಮೇನಹಳ್ಳಿ, ಬಸವನಗುಡಿ. ಕೆ.ಎಚ್ ನಗರ, ರತ್ನಾಪುರ, ಉಕ್ಕುಂದ, ಶಿವಪುರ, ಶ್ರೀನಿವಾಸಪುರ ಮತ್ತು ಸುತ್ತಮುತ್ತ ಗ್ರಾಮಗಳಲ್ಲಿ ಐ.ಪಿ. ಸೆಟ್ ಮತ್ತು ನಿರಂತರ ಜ್ಯೋತಿ ಮಾರ್ಗಗಳಲ್ಲಿ, 11 ಕೆವಿ ಭದ್ರಾ ಪೇಪರ್ ಮಿಲ್, ಆನೆಕೊಪ್ಪ, ನಗರಸಭೆ ಕುಡಿಯುವ ನೀರು ಶುದ್ಧೀಕರಣ ಹಾಗು ಸರಬರಾಜು ಕೇಂದ್ರ,  ಹಳೇಬಾರಂದೂರು ಕುಡಿಯುವ ನೀರು ಸರಬರಾಜು ಕೇಂದ್ರ, ಆನೇಕೊಪ್ಪ, ಎಂಪಿಎಂ ಬಡಾವಣೆ ಸೇರಿದಂತೆ  ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ  ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.