ಆ.29 ‘ಇಂದು ಸುಧಾ ವೇದಿಕೆ’ ಉದ್ಘಾಟನೆ
ಭದ್ರಾವತಿ: ನಗರದ ಶಿವಭದ್ರ ಟ್ರಸ್ಟ್, ಲಯನ್ಸ್ ಕ್ಲಬ್ ಶುಗರ್ ಟೌನ್, ನ್ಯೂಟೌನ್ ತರಂಗ ಕಿವುಡು ಮಕ್ಕಳ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ನಿರ್ಮಿಸಲಾಗಿರುವ ನಾಗೇಶ್ವರಿ ನಟರಾಜ್ ಸ್ಪೂರ್ತಿ ಮಂಟಪ ‘ಇಂದು ಸುಧಾ ವೇದಿಕೆ’ ಉದ್ಘಾಟನೆ ಆ.29ರ ಶನಿವಾರ ಬೆಳಗ್ಗೆ 11:30ಕ್ಕೆ ನಡೆಯಲಿದೆ.
ನಗರದ ಗುತ್ತಿಗೆದಾರ ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಗೌರ್ನರ್ ದಿವಾಕರ್ ಶೆಟ್ಟಿ ವೇದಿಕೆ ಉದ್ಘಾಟಿಸುವರು. ಟ್ರಸ್ಟ್ ಅಧ್ಯಕ್ಷ, ವೈದ್ಯ ಡಾ.ಟಿ. ನರೇಂದ್ರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾರ್ಯದರ್ಶಿ ಎಸ್.ಎನ್ ಸುಭಾಷ್ ಕೋರಿದ್ದಾರೆ.
