ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ವ್ಯತ್ಯಾಸದ ಪಟ್ಟಿಯಲ್ಲಿ 3,171 ಮತದಾರರು ಸೇರ್ಪಡೆ

ಸಂಗ್ರಹವಾಗದ 41,002 ಎಸ್‌ಐಆರ್ ನಮೂನೆಗಳು, 1,189 ಗಣಕೀಕರಣಗೊಳ್ಳದ ನಮೂನೆಗಳ

    ಭದ್ರಾವತಿ: ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪ್ರಸ್ತುತ 112-ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 3,171 ಮತದಾರರನ್ನು ವ್ಯತ್ಯಸದ ಪಟ್ಟಿ(ಎಎಸ್‌ಡಿ)ಯಲ್ಲಿ ಸೇರ್ಪಡೆಗೊಳಿಸಲಾಗಿದೆ. ಉಳಿದಂತೆ ವಿತರಿಸಲಾಗಿರುವ ಎಸ್‌ಐಆರ್ ನಮೂನೆಗಳಲ್ಲಿ ಒಟ್ಟು ಶೇ.19.08ರಷ್ಟು ಅಂದರೆ 41,002 ನಮೂನೆಗಳು ಸಂಗ್ರಹವಾಗಿರುವುದಿಲ್ಲ. 
    ಕ್ಷೇತ್ರದಲ್ಲಿ ಒಟ್ಟು 2,14,907 ಮತದಾರರಿದ್ದು, 253 ಮತಗಟ್ಟೆಗಳಿವೆ. ಈ ಪೈಕಿ ಶೇ.100ರಷ್ಟು ಎಸ್‌ಐಆರ್ ನಮೂನೆಗಳನ್ನು ವಿತರಿಸಲಾಗಿದೆ. ಇಲ್ಲಿಯವರೆಗೂ ಶೇ.80.92 ರಷ್ಟು ಒಟ್ಟು 1,73,905 ನಮೂನೆಗಳು ಗಣಕೀಕರಣಗೊಂಡಿವೆ. 1,189 ನಮೂನೆಗಳು ಬಾಕಿ ಉಳಿದಿದ್ದು, ಮುಂದಿನ 2-3 ದಿನಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ. 
    ಪ್ರಸ್ತುತ ಚುನಾವಣಾ ಆಯೋಗ ನಮೂನೆಗಳ ಪರಿಶೀಲನೆ ವೇಳೆಯಲ್ಲಿ 3,171 ಮತದಾರರನ್ನು ವ್ಯತ್ಯಾಸದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಕ್ಷೇತ್ರದಲ್ಲಿ 6,516 ಶೇ.3.03ರಷ್ಟು ಮತದಾರರು ನಿಧನ ಹೊಂದಿದ್ದು, ಮತಗಟ್ಟೆ ಅಧಿಕಾರಿಗಳು ಮನೆ ಮನೆಗಳಿಗೆ ತೆರಳಿದ ವೇಳೆಯಲ್ಲಿ 2,779 ಶೇ.1.29ರಷ್ಟು ಮತದಾರರು ಲಭ್ಯವಾಗದಿರುವುದು, 28,266 ಶೇ.13.15ರಷ್ಟು ಮತದಾರರು ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿರುವುದು ಹಾಗು ಈಗಾಗಲೇ 3,441 ಶೇ.1.60ರಷ್ಟು ಮತದಾರರು ಎಸ್‌ಐಆರ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಹಿನ್ನಲೆಯಲ್ಲಿ 41,002 ನಮೂನೆಗಳು ಸಂಗ್ರಹವಾಗಿರುವುದಿಲ್ಲ ಎಂಬ ಮಾಹಿತಿ ತಾಲೂಕು ಆಡಳಿತ ನೀಡಿದೆ