ಆ.೬ರಂದು ಭದ್ರಗಿರಿಯಲ್ಲಿ ಆಡಿ ಕೃತಿಕ ಕಾವಡಿ ಉತ್ಸವ


 ಶ್ರೀ ಕ್ಷೇತ್ರ ಭದ್ರಗಿರಿ 
    ಭದ್ರಾವತಿ: ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಆ.೬ರ ಗುರುವಾರ ಆಡಿ ಕೃತಿಕ ಕಾವಡಿ ಉತ್ಸವ ನಡೆಯಲಿದೆ. 
    ಬೆಳಗಿನ ಜಾವ ೪ ಗಂಟೆಯಿಂದ ವಿಶ್ವರೂಪ ದರ್ಶನ ಮತ್ತು ಅಭಿಷೇಕ, ೫ ರಿಂದ ಉತ್ಸವ ಪೂಜೆ ಹಾಗು ಕಾವಡಿ ಹರಕೆ ಸಮರ್ಪಣೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಸಂಜೆ ೫.೩೦ರಿಂದ ದೀಪಾರಾಧನೆ ಹಾಗು ರಾತ್ರಿ ೧೦ಕ್ಕೆ ಅರ್ಧ ಜಾಮಪೂಜೆ ಜರುಗಲಿವೆ. 
    ಆಡಿ ಕೃತಿಕ ಕಾವಡಿ ಉತ್ಸವ ಜಾತ್ರಾ ಮಹೋತ್ಸವಕ್ಕೆ ಆ.೧ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿದ್ದು, ಬುಧವಾರ ಭರಣಿ ಕಾವಡಿ ಉತ್ಸವ ನಡೆಯಿತು. ಬೆಳಿಗ್ಗೆ ೮ ಗಂಟೆಗೆ ಸಂಧಿಪೂಜೆ, ಮಧ್ಯಾಹ್ನ ೧೨ಕ್ಕೆ ಉಚ್ಚಿಕಾಲ ಪೂಜೆ ನೆರವೇರಿತು. ಭದ್ರಾವತಿ ಹಾಗು ತರೀಕೆರೆ ತಾಲೂಕು ಸೇರಿದಂತೆ ಸುತ್ತಮುತ್ತಲಿನ ತಾಲೂಕಿನ ಭಕ್ತರು ಪಾಲ್ಗೊಂಡಿದ್ದರು. 
    ಕಾವಡಿ ಉತ್ಸವ ಅಂಗವಾಗಿ ಭಕ್ತರಿಗಾಗಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರಾ ಮಹೋತ್ಸವ ಯಶಸ್ವಿಗೊಳಿಸುವಂತೆ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ಹಾಗು ಶ್ರೀ ಭದ್ರಗಿರಿ ಸೇವಾ ಟ್ರಸ್ಟ್ ಕೋರಿವೆ.