ಶ್ರೀ ಶಂಕರ ಮಠದಲ್ಲಿ ವಿಜೃಂಭಣೆಯಿಂದ ಜರುಗಿದ `ಶ್ರೀ ಸೌಂದರ್ಯ ಲಹರಿಯ ದೀಪ ನಮಸ್ಕಾರ'


ಭದ್ರಾವತಿ ನಗರದ ಹೊಸ ಸೇತುವೆ ರಸ್ತೆ, ಭದ್ರಾ ನದಿ ದಡದಲ್ಲಿರುವ ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಭಾನುವಾರ ೨೬ನೇ ವರ್ಷದ `ಶ್ರೀ ಸೌಂದರ್ಯ ಲಹರಿಯ ದೀಪ ನಮಸ್ಕಾರ' ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ : ನಗರದ ಹೊಸ ಸೇತುವೆ ರಸ್ತೆ, ಭದ್ರಾ ನದಿ ದಡದಲ್ಲಿರುವ ಶೃಂಗೇರಿ ಶ್ರೀ ಶಂಕರ ಮಠದಲ್ಲಿ ಭಾನುವಾರ ೨೬ನೇ ವರ್ಷದ `ಶ್ರೀ ಸೌಂದರ್ಯ ಲಹರಿಯ ದೀಪ ನಮಸ್ಕಾರ' ವಿಜೃಂಭಣೆಯಿಂದ ಜರುಗಿತು. 
    ಪ್ರತಿ ವರ್ಷದಂತೆ ಈ ಬಾರಿ ಸಹ ರಾಜಲಕ್ಷ್ಮೀ ಟೀಚರ್ ಮತ್ತು ಸಂಗಡಿಗರಿಂದ `ಶ್ರೀ ಸೌಂದರ್ಯ ಲಹರಿಯ ದೀಪ ನಮಸ್ಕಾರ' ಏರ್ಪಡಿಸಲಾಗಿತ್ತು. ದೀಪ ನಮಸ್ಕಾರದ ನಂತರ ಅನ್ನಪೂರ್ಣೇಶ್ವರಿ ಪೂಜೆ, ಗೋಪೂಜೆ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಮಹಾಪ್ರಸಾದ ಕಾರ್ಯಕ್ರಮಗಳು ಜರುಗಿದವು. 
    ಹಳೇನಗರದ ಸಿದ್ದಾರೂಢನಗರ, ಕನಕನಗರ, ಕೋಟೆ ಏರಿಯಾ, ಅಂಬೇಡ್ಕರ್ ನಗರ, ಹನುಮಂತನಗರ, ಭೂತನಗುಡಿ, ಮಾಧವನಗರ, ಹೊಸಮನೆಯ ಗಾಂಧಿನಗರ, ಕೇಶವಪುರ ಬಡಾವಣೆ, ಕುವೆಂಪು ನಗರ, ಸುಭಾಷ್‌ನಗರ, ತ್ಯಾಗರಾಜ ನಗರ ಹಾಗು ನ್ಯೂಟೌನ್ ಭಾಗದ ವಿವಿಧೆಡೆಗಳಿಂದ ಭಕ್ತರು ಆಗಮಿಸಿದ್ದರು.