ಶ್ರೀ ಚರಣ ಸಂಗೀತ ಕಲಾಸೌದ ಉದ್ಘಾಟನೆ : ಹಿರಿಯ ಕಲಾವಿದರಿಗೆ ಸನ್ಮಾನ


ಇತ್ತೀಚೆಗೆ ಭದ್ರಾವತಿ ನಗರದ ಜನ್ನಾಪುರ ಮಲ್ಲೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ಚರಣ ಸಂಗೀತ ಕಲಾಸೌದ ಉದ್ಘಾಟನೆ ಹಾಗು ಸ್ವರ ಸರಸ್ವತಿ, ಗಾನ ಕೋಗಿಲೆ ಎಸ್. ಜಾನಕಮ್ಮನವರ ಸ್ಮರಣಾ ಕಾರ್ಯಕ್ರಮದಲ್ಲಿ  ಹಿರಿಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ: ಇತ್ತೀಚೆಗೆ ನಗರದ ಜನ್ನಾಪುರ ಮಲ್ಲೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ಚರಣ ಸಂಗೀತ ಕಲಾಸೌದ ಉದ್ಘಾಟನೆ ಹಾಗು ಸ್ವರ ಸರಸ್ವತಿ, ಗಾನ ಕೋಗಿಲೆ ಎಸ್. ಜಾನಕಮ್ಮನವರ ಸ್ಮರಣಾ ಕಾರ್ಯಕ್ರಮದಲ್ಲಿ  ಹಿರಿಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಒಂದು ಕಾಲದಲ್ಲಿ ಉಕ್ಕಿನ ನಗರದ ಜನರ ಮನೆಮಾತಾಗಿದ್ದ ಗೀತಾಂಜಲಿ ಆರ್ಕೇಸ್ಟ್ರಾ ಕಾಲ ಕಳೆದಂತೆ ಕಣ್ಮರೆಯಾಗಿದ್ದು, ಈ ಆರ್ಕೇಸ್ಟ್ರಾ ನೇತೃತ್ವವಹಿಸಿದ್ದ ಶ್ರೀನಿವಾಸ್ ನಂತರ ದಿನಗಳಲ್ಲಿ ಗೀತಾಂಜಲಿ ಶ್ರೀನಿವಾಸ್ ಎಂದು ಪ್ರಸಿದ್ದರಾಗಿದ್ದರು. ಅವರ ನಿಧನದ ನಂತರ ಅವರ ಪುತ್ರ ಚರಣ್ ಕವಾಡ್ ಮತ್ತು ಪುತ್ರಿ ಸಂಗೀತ ಇಬ್ಬರು ಸೇರಿ ಇದೀಗ ಹೊಸದಾಗಿ ಶ್ರೀ ಚರಣ ಸಂಗೀತ ಕಲಾಸೌದ ಸಂಘಟನೆ ಆರಂಭಿಸುವ ಮೂಲಕ ತೆರೆಮರೆಯಲ್ಲಿರುವ ಹಳೇಯ ಕಲಾವಿದರನ್ನು ಗುರುತಿಸಿ ಗೌರವಿಸುವ ಮೂಲಕ ದಿವಂಗತ ಗೀತಾಂಜಲಿ ಶ್ರೀನಿವಾಸ್ ಅವರ ಆಶಯವನ್ನು ನನಸಾಗಿಸಿದ್ದಾರೆ. ಅಲ್ಲದೆ  ಸ್ವರ ಸರಸ್ವತಿ, ಗಾನ ಕೋಗಿಲೆ ಎಸ್. ಜಾನಕಮ್ಮನವರನ್ನು ಸ್ಮರಿಸುವ ಮೂಲಕ ಇಂದಿನ ಯುವ ಕಲಾವಿದರು ಅವರಂತೆ ಉನ್ನತ ಸ್ಥಾನಕ್ಕೇರಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.   
    ಉದ್ಯಮಿ ಬಿ.ಕೆ ಜಗನ್ನಾಥ, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಉದ್ಘಾಟಿಸಿದರು. 
    ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಜ್ಯೂನಿಯರ್ ವಿಷ್ಣುವರ್ಧನ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಪೇಕ್ಷ ಮಂಜುನಾಥ್, ಸೋನಿ ಮೆಲೋಡಿಸ್ ಹರೀಶ್, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬದರಿನಾರಾಯಣ, ಮುಖಂಡ ಪ್ರಭುಗೌಡ, ಶ್ರೀ ಚರಣ ಸಂಗೀತ ಕಲಾಸೌದ ಅಧ್ಯಕ್ಷೆ ಬಿ.ಎಸ್ ಸಂಗೀತ, ಪ್ರಧಾನ ಕಾರ್ಯದರ್ಶಿ ಚರಣ್ ಕವಾಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.