ಆ.೩ರಂದು ಎಸ್‌ಐಆರ್ ಕುರಿತು `ಜಾಗೃತಿ ಬೀದಿನಾಟಕ'


    ಭದ್ರಾವತಿ: ನಗರದ ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದಿಂದ ಸಾಮಾಜಿಕ ಕಳಕಳಿಯಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ - ೨೦೨೬ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ `ಜಾಗೃತಿ ಬೀದಿನಾಟಕ' ಕಾರ್ಯಕ್ರಮ ಆ.೩ರ ಸೋಮವಾರ ಆಯೋಜಿಸಲಾಗಿದೆ. 
  ನಗರದ ರಂಗಪ್ಪ ವೃತ್ತ ಮತ್ತು ಮಾಧವಚಾರ್ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಸೇರಿದಂತೆ ೩ ಕಡೆ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಚುನಾವಣಾ ಆಯೋಗದ ಆದೇಶದಂತೆ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಪೂರಕವಾಗಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಜಾನಪದ ಕಲಾಸಂಘ ತೊಡಗಿಸಿಕೊಂಡಿದೆ. ಸಾರ್ವಜನಿಕರು ಈ `ಜಾಗೃತಿ ಬೀದಿನಾಟಕ' ವೀಕ್ಷಿಸಲು ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸುವಂತೆ  ಕಲಾಸಂಘದ ಕಾರ್ಯದರ್ಶಿಯಾದ ತಮಟೆ ಜಗದೀಶ್ ಕೋರಿದ್ದಾರೆ.