`ತಿರು ವಿಳಕ್ಕು ಪೂಜೆ' : ಮಾರಿಯಮ್ಮ ದೇವಿಗೆ ಬಳೆ ಅಲಂಕಾರ


ಭದ್ರಾವತಿ ನಗರದ ಬಿ.ಎಚ್ ರಸ್ತೆ, ಮೀನುಗಾರರ ಬೀದಿ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಶುಕ್ರವಾರ ಅಮ್ಮನವರಿಗೆ ವಿಶೇಷವಾಗಿ ಬಳೆ ಅಲಂಕಾರ ಕೈಗೊಳ್ಳಲಾಗಿದ್ದು, ಭಕ್ತರ ಗಮನ ಸೆಳೆಯಿತು. 
    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಮೀನುಗಾರರ ಬೀದಿ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಅರುಲ್ಮಿಗು ಶ್ರೀ ಮಾರಿಯಮ್ಮನ್ ದೇವಾಲಯ ಸೇವಾ ಟ್ರಸ್ಟ್ ತಮಿಳು ತಿಂಗಳಾದ 'ಆಡಿ'ಯ ಐದನೇ ಶುಕ್ರವಾರ ವಿಶೇಷ `ತಿರು ವಿಳಕ್ಕು ಪೂಜೆ'ಯನ್ನು (ಪವಿತ್ರ ದೀಪಾರಾಧನೆ) ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. 
    ಅಮ್ಮನವರಿಗೆ ವಿಶೇಷವಾಗಿ ಬಳೆಗಳಿಂದ ಅಲಂಕರಿಸಲಾಗಿದ್ದು, ಭಕ್ತರ ಕಣ್ಮನ ಸೆಳೆಯಿತು. ವಿಶೇಷ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿತು.  ಮಹಿಳೆಯರು `ಕುತು ವಿಳಕ್ಕು'(ಸಾಂಪ್ರದಾಯಿಕ ಎಣ್ಣೆ ದೀಪ) ಬೆಳಗಿಸುವ ಮೂಲಕ ಹರಕೆ ಸಮರ್ಪಿಸಿದರು. ನಗರದ ವಿವಿಧೆಡೆಗಳಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಅಮ್ಮನವರ ದರ್ಶನ ಪಡೆದರು.