ಉಕ್ಕಿನ ನಗರದಲ್ಲಿ ಇಂಡಿಯಾ ಗೇಟ್, ವೀರ ಯೋಧರ ಪ್ರತಿಮೆ, ಅಶೋಕ ಸ್ತಂಭ ಅನಾವರಣ
ಭದ್ರಾವತಿಯಲ್‌ಲಿ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ಬಳಿ ಇಂಡಿಯಾ ಗೇಟ್ ಮತ್ತು ವೀರ ಯೋಧರ ಪ್ರತಿಮೆ ಕಲಾಕೃತಿಗಳು, ಅಶೋಕ ಸ್ತಂಭ, ಹಾಲಪ್ಪ ವೃತ್ತದಲ್ಲಿ ಸ್ಪೈರಲ್ ಮಾರ್ಡನ್ ಆರ್ಟ್ ಸ್ಟ್ರಕ್ಚರಲ್, ರೈಲ್ವೆ ನಿಲ್ದಾಣ ಮುಂಭಾಗ, ನಗರಸಭೆ ವಾಣಿಜ್ಯ ಮಾರುಕಟ್ಟೆ ಬಳಿ ನವೀಕರಣಗೊಂಡ ಭಾರತರತ್ನ, ಸರ್.ಎಂ ವಿಶ್ವೇಶ್ವರಾಯ ಪುತ್ಥಳಿ ಹಾಗು ಪರ್ಗೋಲಾ ಮತ್ತು ಅಮರಶಿಲ್ಪಿ ಜಕಣಾಚಾರಿ ಸೇತುವೆಯಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಕಡದಕಟ್ಟೆವರೆಗೂ ನೂತನವಾಗಿ ನಿರ್ಮಿಸಿರುವ ಡಿವೈಡರ್ ಹಾಗು ಅಲಂಕೃತ ಬೀದಿ ದೀಪಗಳ ಉದ್ಘಾಟನೆ ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ನೆರವೇರಿಸಿದರು.
ಭದ್ರಾವತಿ : ನಗರವನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ನಗರಸಭೆ ವತಿಯಿಂದ ಕೋಟ್ಯಾಂತರ ರು. ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಸ್ವಾತಂತ್ರ್ಯೋತ್ಸವ ದಿನವಾದ ಶನಿವಾರ ಉದ್ಘಾಟನೆಗೊಳಿಸಿದರು.
ಡಾ. ಬಿ.ಆರ್ ಅಂಬೇಡ್ಕರ್ ವೃತ್ತದ ಬಳಿ ಇಂಡಿಯಾ ಗೇಟ್ ಮತ್ತು ವೀರ ಯೋಧರ ಪ್ರತಿಮೆ ಕಲಾಕೃತಿಗಳು, ಅಶೋಕ ಸ್ತಂಭ, ಹಾಲಪ್ಪ ವೃತ್ತದಲ್ಲಿ ಸ್ಪೈರಲ್ ಮಾರ್ಡನ್ ಆರ್ಟ್ ಸ್ಟ್ರಕ್ಚರಲ್, ರೈಲ್ವೆ ನಿಲ್ದಾಣ ಮುಂಭಾಗ, ನಗರಸಭೆ ವಾಣಿಜ್ಯ ಮಾರುಕಟ್ಟೆ ಬಳಿ ನವೀಕರಣಗೊಂಡ ಭಾರತರತ್ನ, ಸರ್.ಎಂ ವಿಶ್ವೇಶ್ವರಾಯ ಪುತ್ಥಳಿ ಹಾಗು ಪರ್ಗೋಲಾ ಮತ್ತು ಅಮರಶಿಲ್ಪಿ ಜಕಣಾಚಾರಿ ಸೇತುವೆಯಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಕಡದಕಟ್ಟೆವರೆಗೂ ನೂತನವಾಗಿ ನಿರ್ಮಿಸಿರುವ ಡಿವೈಡರ್ ಹಾಗು ಅಲಂಕೃತ ಬೀದಿ ದೀಪಗಳ ಉದ್ಘಾಟನೆ ನೆರವೇರಿಸಿದರು.
ನಗರಸಭೆ ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಪೌರಾಯುಕ್ತ ಕೆ.ಎನ್ ಹೇಮಂತ್ ಹಾಗು ಸದಸ್ಯರು, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಬಿ.ಎಸ್ ಗಣೇಶ್, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಮಹಿಳೆಯರು, ವಿದ್ಯಾರ್ಥಿಗಳು, ಮಾಜಿ ಸೈನಿಕರು, ಅಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

.jpg)
.jpg)